ಕಾಡಾನೆಯಿಂದ ವಾಹನ ಸವಾರರಲ್ಲಿ ಆತಂಕ

ನಾಲ್‌ರೋಡ್ - ನೆಲ್ಲೂರು ಮಾರ್ಗದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಶನಿವಾರ ಕಾಣಿಸಿಕೊಂಡ ಕಾಡಾನೆ.
ನಾಲ್‌ರೋಡ್ - ನೆಲ್ಲೂರು ಮಾರ್ಗದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಶನಿವಾರ ಕಾಣಿಸಿಕೊಂಡ ಕಾಡಾನೆ.
Published on
ಹನೂರು: ತಾಲೂಕಿನ ನಾಲ್‌ರೋಡ್ - ನೆಲ್ಲೂರು ಮಾರ್ಗದಲ್ಲಿ ಶನಿವಾರ ಕಾಡಾನೆಯೊಂದು ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕವನ್ನುಂಟು ಮಾಡಿತು.
ಈ ಮಾರ್ಗವು ಅರಣ್ಯ ಪ್ರದೇಶದೊಳಗೆ ಹಾದು ಹೋಗಿದ್ದು, ನೆಲ್ಲೂರು, ಹೂಗ್ಯಂ, ಜಲ್ಲಿಪಾಳ್ಯ ಸೇರಿದಂತೆ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಿಂದೆ ಈ ಮಾರ್ಗದಲ್ಲಿ ಕಾಡಾನೆ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಕಾಡಾನೆಯೊಂದು ನೆಲ್ಲೂರು ಬಳಿಯ ಅರಣ್ಯ ಪ್ರದೇಶದ ರಸ್ತೆಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದ್ದು, ಜನರಲ್ಲಿ ಅದರಲ್ಲೂ ವಾಹನ ಸವಾರರಲ್ಲಿ ಆತಂಕವನ್ನು ಂಟು ಮಾಡಿದೆ.
ಶನಿವಾರ ಮಧ್ಯಾಹ್ನ ಸುಮಾರು 1ರ ವೇಳೆಯಲ್ಲಿ ಈ ಮಾರ್ಗದಲ್ಲಿ ಕಾಡಾನೆ ಕಾಣಸಿಕೊಂಡಿದ್ದು, ವಾಹನ ಸವಾರರಲ್ಲಿ ಭಯ ಉಂಟು ಮಾಡಿತು. ಬಳಿಕ ಸವಾರರು ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು. ಕಾಡಾನೆ ರಸ್ತೆಯನ್ನು ದಾಟಿ ಅರಣ್ಯ ಪ್ರದೇಶದೊಳಗೆ ತೆರಳಿತು. ವಾಹನ ಸವಾರರು ನಿಟ್ಟುಸಿರು ಬಿಟ್ಟು ಪಯಣ ಮುಂದುವರಿಸಿದರು. ಇದರ ದೃಶ್ಯವನ್ನು ಸಾರ್ವಕರೊಬ್ಬರೂ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net