ಕಾಡಾನೆ ದಾಳಿಗೆ ಬಾಳೆ, ತೆಂಗು ಬೆಳೆ ನಾಶ

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ನವೀನ್ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿರುವುದು.
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ನವೀನ್ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಲಕ್ಷಾಂತರ ರೂ. ನಷ್ಟ
ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಗೋಪಾಲಪುರ ಗ್ರಾಮದ ಜಮೀನಿನಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಬಾಳೆ ಬೆಳೆ ನಾಶಗೊಳಿಸಿದೆ.
ಗೋಪಾಲಸ್ವಾಮಿಬೆಟ್ಟ ವಲಯದ ಅರಣ್ಯದಿಂದ ಸೋಮವಾರ ರಾತ್ರಿ ಆಹಾರ ಅರಸಿ ಬಂದ ಕಾಡಾನೆ ಗ್ರಾಮದ ನವೀನ್ ಎಂಬುವರ ಜಮೀನಿಗೆ ದಾಳಿಯಿಟ್ಟು ಬಾಳೆ ಬೆಳೆಯನ್ನು ತುಳಿದು ತೆಂಗಿನ ಗಿಡಗಳನ್ನು ಮುರಿದು ಹಾಕಿದೆ. ಮುಸುಕಿನ ಜೋಳದ ಬೆಳೆಗಳು, ಜಮೀನಿನ ತಂತಿ ಬೇಲಿ, ಹನಿ ನೀರಾವರಿ ಪರಿಕರಗಳನ್ನು ಕಿತ್ತಿಸೆದು ಪುಂಡಾಟ ಮೆರೆದಿದೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟವುಂಟಾಗಿದೆ. ಮಂಗಳವಾರ ಬೆಳಗ್ಗೆ ಜಮೀನಿಗೆ ಹೋದ ನವೀನ್ ಈ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೆಳೆನಷ್ಟದ ಪರಿಶೀಲನೆ ನಡೆಸಿದರು.
ರಾತ್ರಿ ಗಸ್ತು ಹೆಚ್ಚಿಸಲು ಒತ್ತಾಯ: ಕಾಡು ಪ್ರಾಣಿಗಳು ರೈತರ ಜಮೀನುಗಳತ್ತ ಬರದಂತೆ ತೆಗೆದಿದ್ದ ಕಂದಕ ಮಳೆ, ಇತರ ಪ್ರಾಕೃತಿಕ ಕಾರಣಗಳಿಂದ ಮುಚ್ಚಿ ಹೋಗಿದೆ. ಇದರಿಂದ ಕಾಡಾನೆ ಸುಲಭವಾಗಿ ರೈತರ ಜಮೀನುಗಳಿಗೆ ಬಂದು ಹೋಗುತ್ತಿದ್ದು, ಬಾಳೆ, ಮುಸುಕಿನ ಜೋಳ, ತಕರಾರಿ ಬೆಳೆಗಳು, ಬೆಳವಣಿಗೆ ಹಂತದ ತೆಂಗು ಇತರ ಬೆಳೆಗಳನ್ನು ನಾಶ ಮಾಡುತ್ತಿವೆ. ಆದ್ದರಿಂದ ಇವುಗಳು ಕಾಡಿನಿಂದ ಹೊರಬರದಂತೆ ರಾತ್ರಿ ಗಸ್ತು ಹೆಚ್ಚಿಸಬೇಕು ಹಾಗೂ ಮಾರುಕಟ್ಟೆ ಮೌಲ್ಯದಲ್ಲಿ ಬೆಳೆನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ರೈತ ಸಂಘಟನೆಯವರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net