ಕಾಡಾನೆ ದಾಳಿಗೆ ಮುಸುಕಿನ ಜೋಳದ ಫಸಲು ನಾಶ

ಹೂಗ್ಯಂ ಗ್ರಾಮದ ಸುಂದ್ರ ಎಂಬುವರ ಜಮೀನಿಗೆ ಕಾಡಾನೆಯೊಂದು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿರುವುದು.
ಹೂಗ್ಯಂ ಗ್ರಾಮದ ಸುಂದ್ರ ಎಂಬುವರ ಜಮೀನಿಗೆ ಕಾಡಾನೆಯೊಂದು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿರುವುದು.
Published on
ಹನೂರು: ತಾಲೂಕಿನ ಗಡಿಯಂಚಿನ ಗ್ರಾಮ ಹೂಗ್ಯಂನ ಜಮೀನೊಂದಕ್ಕೆ ಬುಧವಾರ ರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ತೆಂಗಿನ ಸಸಿ ಹಾಗೂ ಮುಸುಕಿನ ಜೋಳದ ಫಸಲನ್ನು ನಾಶಪಡಿಸಿದೆ.
ಗ್ರಾಮದ ಸುಂದ್ರ ಎಂಬುವರು ಹಳ್ಳದ ಸಮೀಪದಲ್ಲಿ ಜಮೀನನ್ನು ಹೊಂದಿದ್ದು, ಮುಸುಕಿನ ಜೋಳದ ಫಸಲನ್ನು ಬೆಳೆದಿದ್ದಾರೆ. ರಾತ್ರಿ ಸಮೀಪದ ತಮಿಳುನಾಡು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲು ಹಾಗೂ ತೆಂಗಿನ ಸಸಿಗಳನ್ನು ನಾಶಪಡಿಸಿದೆ. ಜತೆಗೆ ತೊಗರಿ ಫಸಲನ್ನು ತಿಂದು ಹಾಕಿದೆ. ಇದರಿಂದ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಯೊಂದು ಜಮೀನುಗಳಿಗೆ ಲಗ್ಗೆ ಇಡುತ್ತಲೇ ಇದ್ದು, ಫಸಲನ್ನು ನಾಶಪಡಿಸುತ್ತಿದೆ. ಕಾಡಾನೆಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಕಾಡಾನೆ ಜಮೀನುಗಳಿಗೆ ಲಗ್ಗೆ ಇಡದಂತೆ ಕ್ರಮಕೈಗೊಳ್ಳಬೇಕು. ಜತೆಗೆ ಬೆಳೆ ನಷ್ಟಕ್ಕೆ ಪರಿಹಾರ ದೊರಕಿಸಿ ಕೊಡುವಂತೆ ರೈತ ಸುಂದ್ರ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net