ಲಯನ್ಸ್ ಸುವರ್ಣ ಮಹೋತ್ಸವ ಪ್ರಯುಕ್ತ ಭಾನುವಾರ ಬೆಂಗಳೂರು ರಸ್ತೆಯ ಕೊಳ್ಳೇಗಾಲ ಪಟ್ಟಣ ಪ್ರವೇಶ ಮುಖ್ಯದ್ವಾರದಲ್ಲಿ ಸಾರ್ವಜನಿಕರಿಗೆ ಸ್ವಾಗತ ಕೋರುವ ಬೋರ್ಡನ್ನು ಜಿಲ್ಲಾ ಪ್ರಂತಪಾಲ ಲಯನ್ಸ್ ರಾಜಶೇಖರ್ ಅನಾವರಣಗೊಳಿಸಿದರು. ಮಾದೇಶ್, ವಿರೂಪಾಕ್ಷ ಸ್ವಾಮಿ, ಮಹದೇವಸ್ವಾಮಿ ಇತರರಿದ್ದರು.
ಕೊಳ್ಳೇಗಾಲ: ಲಯನ್ಸ್ ಸುವರ್ಣ ಮಹೋತ್ಸವ ಪ್ರಯುಕ್ತ ಭಾನುವಾರ ಬೆಂಗಳೂರು ರಸ್ತೆಯ ಕೊಳ್ಳೇಗಾಲ ಪಟ್ಟಣ ಪ್ರವೇಶ ಮುಖ್ಯದ್ವಾರ ಮತ್ತು ಮೈಸೂರು ರಸ್ತೆಯ ಮುಡಿಗುಂಡ ಬಳಿ ಸಾರ್ವಜನಿಕರಿಗೆ ಸ್ವಾಗತ ಕೋರುವ ಬೋರ್ಡ್ ಅನಾವರಣಗೊಳಿಸಲಾಯಿತು.
ಲಯನ್ಸ್ ವಿಭಾಗದ 317ಜಿ ಜಿಲ್ಲಾ ಪ್ರಾಂತಪಾಲ ಲಯನ್ಸ್ ರಾಜಶೇಖರ್ ಸ್ವಾಗತ ಬೋರ್ಡ್ ಅನಾವರಣಗೊಳಿಸಿದರು.
ಕೊಳ್ಳೇಗಾಲ ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಕಾರ್ಯದರ್ಶಿ ವಿರೂಪಾಕ್ಷ ಸ್ವಾಮಿ, ಖಜಾಂಚಿ ಮಹದೇವಸ್ವಾಮಿ, ಸದಸ್ಯರಾದ ಚೆನ್ನ ಮಾದೇಗೌಡ, ಮಹಾದೇವ ಪ್ರಸಾದ್ ಲಯನ್ಸ್ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್ .ನಾಗರಾಜು ಕೊಂಗರಹಳ್ಳಿ, ನಿರ್ದೇಶಕ ಒವಿ ಸತೀಶ್ ಇದ್ದರು.