ಪ್ರತಿ ವರ್ಷ ಜೂನ್, ಜುಲೈನಲ್ಲಿ ಮುಂಗಾರು ಮಳೆ ಅಬ್ಬರಿಸಿ ಕಾವೇರಿ ಮೈದುಂಬಿ ಹರಿದು ಭರಚುಕ್ಕಿ ಬೋರ್ಗರೆದು ಎಲ್ಲರನ್ನು ಆಕರ್ಷಿಸುವುದು ವಾಡಿಕೆಯಾಗಿದೆ. ಈ ಬಾರಿ ಮುಂಗಾರು ಅಭಾವದಿಂದ ಜೂನ್, ಜುಲೈ ತಿಂಗಳಲ್ಲಿ ಭರಚುಕ್ಕಿ ಭಣಗುಡುತ್ತಿತ್ತು. ಆದರೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟಿನಿಂದ ನೀರು ಹರಿಸಲಾಗಿದ್ದು ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿ ಭರಚುಕ್ಕಿ ಬೋರ್ಗರೆಯಲು ಆರಂಭಿಸಿದೆ.