ಪಿ.ಜಿ. ಪಾಳ್ಯದ ಕೆರೆ ಅಭಿವೃದ್ಧಿ ಮಾದರಿ

ಪಿ.ಜಿ. ಪಾಳ್ಯದಲ್ಲಿ ಕೈಗೊಂಡಿರುವ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕೆ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಮಹದೇವಪ್ರಭು, ಮಹದೇವಸ್ವಾಮಿ, ವಿಜಯಕುಮಾರ್ ಇತರರಿದ್ದರು.
ಪಿ.ಜಿ. ಪಾಳ್ಯದಲ್ಲಿ ಕೈಗೊಂಡಿರುವ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕೆ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಮಹದೇವಪ್ರಭು, ಮಹದೇವಸ್ವಾಮಿ, ವಿಜಯಕುಮಾರ್ ಇತರರಿದ್ದರು.
Published on
ಹನೂರು : ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಾಗಿರುವ ಕೆರೆ ಅಭಿವೃದ್ಧಿ ಕಾರ್ಯ ಇತರ ಗ್ರಾಮಗಳಿಗೂ ಮಾದರಿಯಾಗಿದೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿರುವ ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿಯ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದು ಮಾತನಾಡಿದರು.
ನಾನು ಶಾಸಕನಾಗುವುದಕ್ಕಿಂತ ಮುಂಚೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಕೆಲವರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತಿದ್ದರು. ಇದರಿಂದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಾಗುತ್ತಿರಲಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ತೊಡುಕಾಗಿ ಪರಿಣಮಿಸಿತ್ತು. ಒತ್ತುವರಿಯಾಗಿರುವ 15 ಎಕರೆ ಜಾಗವನ್ನು ತೆರೆವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಶಾಸಕನಾದ ಬಳಿಕ ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸಿದಾಗ ಒತ್ತುವರಿಯಾಗಿದ್ದ ಕೆರೆ ಜಾಗವನ್ನು ರೈತರೇ ಸ್ವಯಂ ಪ್ರೇರಿತರಾಗಿ ತೆರೆವುಗೊಳಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದೀಗ ಕೆರೆಯ ಒಟ್ಟು ವಿಸ್ತೀರ್ಣ 16.5 ಎಕರೆಯಾಗಿದೆ. 40 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಮುಂದಿನ ಮಳೆಗಾಲದ ವೇಳೆ ಅಧಿಕ ನೀರು ಸಂಗ್ರಹಣೆಯಾಗಲಿದೆ. ಜತೆಗೆ ಉಡುತೊರೆ ಜಲಾಶಯಕ್ಕೆ ನೀರು ಹರಿಯುವ ಹಳ್ಳದ ಮೂಲಕವೂ ಕೆರೆಗೆ ನೀರು ತುಂಬಿಸಲಾಗುವುದು. ಇದರಿಂದ ಗ್ರಾಮದ ಸುತ್ತಮುತ್ತ ಅಂತರ್ಜಲ ಮಟ್ಟ ಸುಧಾರಿಸಲಿದೆ. ಬೇಸಿಗೆ ವೇಳೆ ತಲೆ ದೋರುವ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಜತೆಗೆ ಕೃಷಿಗೂ ಅನುಕೂಲವಾಗಲಿದೆ ಎಂದರು.
ಕೆರೆ ತುಂಬಿದರೆ ಗ್ರಾಮದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಕೆರೆಯ ಅಭಿವೃದ್ಧಿ ಕಾಮಗಾರಿ ತಾಲೂಕಿನ ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ರೈತ ಸಂಘದ ಮಹದೇವಪ್ರಭು ಮಾತನಾಡಿ, ಕೆರೆ ಒತ್ತುವರಿಯನ್ನು ತೆರೆವುಗೊಳಿಸಿ ಅಭಿವೃದ್ಧಿ ಪಡಿಸುವಂತೆ ಈ ಹಿಂದೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಶಾಸಕರು ಅಗತ್ಯ ಕ್ರಮವಹಿಸಿದ ಪರಿಣಾಮ ಈ ಕೆಲಸ ಸಮರ್ಥವಾಗಿ ಆಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವಣ್ಣ, ಮಹದೇವಸ್ವಾಮಿ, ವಿಜಯಕುಮಾರ್, ನಿಂಗಶೆಟ್ಟಿ, ವೆಂಕಟೇಶ್ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net