ಇದರಿಂದ ರೊಚ್ಚಿಗೆದ್ದ ರೈತರು, ತಮಿಳುನಾಡಿಗೆ ನೀರು ಹರಿದುಹೋಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ರಾಜ್ಯದ ರೈತರ ಹಿತ ಕಾಯುವ ಬದಲು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ. ನಮ್ಮ ರೈತರ ಜಮೀನುಗಳನ್ನು ಬರಡು ಮಾಡಿ, ಅದನ್ನು ರೈತರಿಂದ ಮಾರಿಸಿ ಅವರು ಬಿಡದಿಯಲ್ಲಿ ಎಐ ಪಾರ್ಕ್‌ಗೆ ನೀರು ಹರಿಸುವ ಇರಾದೆ ಹೊಂದಿದ್ದಾರೆ, ಅದು ನಡೆಯುವುದಿಲ್ಲ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮುಂದುವರಿಸಿದರು.