ಮತದಾರರ ಪಟ್ಟಿ ಪರಿಷ್ಕರಣೆ ಉತ್ತಮ ಬೆಳವಣಿ

ಚಾಮರಾಜನಗರ ತಾಲೂಕಿನ  ತಾಲೂಕಿನ ಉಡಿಗಾಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾ ಬಿಜೆಪಿ  ಪ್ರಧಾನ ಕಾರ್ಯದರ್ಶಿ  ಪಿ. ವೃಷಬೇಂದ್ರಪ್ಪ ಮತದಾರರ ವಿಶೇಷ ಪರಿಷ್ಕರಣಾ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪದ್ಮಾ, ಕೊತ್ತಲವಾಡಿ ಮಾದಪ್ಪ, ಉತ್ತುವಳ್ಳಿ ಆನಂದ್ ಇತರರು ಇದ್ದರು.
ಚಾಮರಾಜನಗರ ತಾಲೂಕಿನ ತಾಲೂಕಿನ ಉಡಿಗಾಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ ಮತದಾರರ ವಿಶೇಷ ಪರಿಷ್ಕರಣಾ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪದ್ಮಾ, ಕೊತ್ತಲವಾಡಿ ಮಾದಪ್ಪ, ಉತ್ತುವಳ್ಳಿ ಆನಂದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ ಹೇಳಿಕೆ
  • ಉಡಿಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾ ಸಂಪರ್ಕ ಅಭಿಯಾನ
ಚಾಮರಾಜನಗರ: ಪ್ರತಿಯೊಬ್ಬ ಭಾರತೀಯ ಪ್ರಜೆಯು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು. ದೇಶದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ ತಿಳಿಸಿದರು.
ತಾಲೂಕಿನ ಉಡಿಗಾಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕೇಂದ್ರಗಳಾದ ಉಡಿಗಾಲ, ನಂಜೇದೇವನಪುರ, ಹೆಗ್ಗೋಠಾರ, ಶಿವಪುರ ಗ್ರಾಮಗಳ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣಾ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಇದೊಂದು ಮಹತ್ವ ಪೂರ್ಣವಾದ ಕಾರ್ಯಕ್ರಮವನ್ನು ಜಾರಿ ಮಾಡಿದರು. ಚುನಾವಣೆ ಇನ್ನು ಎರಡು ಮೂರು ವರ್ಷದ ಇದೆ ಎನ್ನುವಾಗ ವರ್ಷಕ್ಕೆ ಒಮ್ಮೆ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತಿತ್ತು. ಆದರೆ, ಈ ಸಂದರ್ಭದಲ್ಲಿ ಅರ್ಹ ಮತದಾರರು ಕೈ ಬಿಟ್ಟು ಹೋಗುವ ಸಾಧ್ಯತೆ ಹೆಚ್ಚಿತ್ತು. ಅಲ್ಲದೇ ಮತದಾರರ ಪಟ್ಟಿಯಲ್ಲಿನ ಲೋಪದಿಂದ ಚುನಾವಣೆಯಲ್ಲಿ ಶೇಕಡವಾರು ಮತದಾನದದಲ್ಲಿ ಕಡಿಮೆಯಾಗುತ್ತಿತ್ತು. ಇದನ್ನು ಮನಗಂಡು ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಭಾರತೀಯರು ಸಹ ಭಾಗವಹಿಸಬೇಕೆಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಆಯ್ಕೆಯಾಗಿರುವ ಪ್ರತಿನಿಧಿಗಳು ನಿಮ್ಮ ಮನೆ ಬಾಗಿಲು ಬಂದು ಅರ್ಜಿಯನ್ನು ನೀಡುತ್ತಾರೆ. ನಿಖರವಾದ ಮಾಹಿತಿಗಳನ್ನು ಭರ್ತಿ ಮಾಡಿ ಅವರಿಗೆ ನೀಡುವ ಮೂಲಕ ಈ ಪ್ರಕ್ರಿಯೆಯಲ್ಲಿ ಎಲ್ಲರು ಭಾಗವಹಿಸಿ, ಜೊತೆಗೆ ನಮ್ಮ ಪಕ್ಷದ ಮುಖಂಡರು. ಬಿಎಲ್‌ಎ 2ಗಳು, ಬೂತ್ ಮಟ್ಟದ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಮೂಲಕ ಪ್ರಬುದ್ದ ಭಾರತವನ್ನು ನಿರ್ಮಾಣ ಮಾಡಲು ಎಲ್ಲರು ಶ್ರಮಿಸೋಣ ಎಂದು ವೃಷಭೇಂದ್ರಪ್ಪ ತಿಳಿಸಿದರು.
ಅಭಿಯಾನದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪದ್ಮಾ, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಕೊತ್ತಲವಾಡಿ ಮಾದಪ್ಪ, ಮಂಡಲ ಕಾರ್ಯದರ್ಶಿ ಉತ್ತವಳ್ಳಿ ಮಹೇಶ್, ಮಹಾ ಶಕ್ತಿಕೇಂದ್ರ ಅಧ್ಯಕ್ಷ ಮಂಜು, ಬಿಜೆಪಿ ಮುಖಂಡರಾದ ಕೆ.ಕೆ. ಹುಂಡಿ ಕುಮಾರ್, ಉತ್ತುಹಳ್ಳಿ ಆನಂದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net