ವಿವೇಕಾನಂದ ಪ್ರೌಢಶಾಲೆ ಸಾಧನೆ

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಹನೂರಿನ ಶ್ರೀವಿವೇಕಾನಂದ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜೇಂದ್ರನ್, ಸುರೇಶ್‌ನಾಯ್ಡು, ಮಧುಸೂದನ್, ಸತ್ಯಪ್ರಿಯಾ ಇತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಹನೂರಿನ ಶ್ರೀವಿವೇಕಾನಂದ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜೇಂದ್ರನ್, ಸುರೇಶ್‌ನಾಯ್ಡು, ಮಧುಸೂದನ್, ಸತ್ಯಪ್ರಿಯಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೇ.99.18ರಷ್ಟು ಲಿತಾಂಶ
ಹನೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀವಿವೇಕಾನಂದ ಪ್ರೌಢಶಾಲೆಯು ಶೇ.99.18ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಯಲ್ಲಿ ಶಾಲೆಯ 122 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 39 ಅತ್ಯುನ್ನತ ಶ್ರೇಣಿ, 69 ಪ್ರಥಮ ಶ್ರೇಣಿ, 10 ದ್ವಿತೀಯ ಶ್ರೇಣಿ ಹಾಗೂ ಮೂವರು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳಾದ ಎಸ್.ಸಮೀಕ್ಷಾ 615, ಎಂ.ಪ್ರತೀಕ್ಷಾ 608, ಎನ್.ಚಂದ್ರಕಲಾ 602, ಎನ್.ನಿಶಾಂತ್ 600 ಹಾಗೂ ಟಿ.ಆರ್ ತೇಜೇಶ್ವರಿ 599 ಅಂಕ ಗಳಿಸಿದ್ದಾರೆ.
ಶೇ.100 ರಷ್ಟು ಫಲಿತಾಂಶ: ತಾಲೂಕಿನ ಬಸವನಗುಡಿಯ ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆಯು ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಎಸ್.ಹರ್ಷ 590, ಎಸ್.ಅಂಜಲಿ 500, ಹಾಗೂ ವಿ.ಚಂದನ್ 488 ಅಂಕವನ್ನು ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷೆ ಉಮಾ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ರಾಜೇಂದ್ರನ್, ಖಜಾಂಚಿ ಶ್ರೀದೇವಿ ಹಾಗೂ ಪ್ರಾಂಶುಪಾಲ ಮಧುಸೂದನ್ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net