ಈ ಸಂದರ್ಭದಲ್ಲಿ ಎನ್‌ಎಚ್ ಇಇ ಅನಿಲ್ ಅವರು ಕಳುಹಿಸುವ ಪತ್ರವನ್ನು ಎಇಇ ರೇಣುಕಾ ಕಾಯುತ್ತಿದ್ದರು. ಪತ್ರ ಕೈಗೆ ಸಿಗುತ್ತಿದ್ದಂತಯೇ ಸ್ಥಳಕ್ಕೆ ಆಗಮಿಸಿ ಎಇಇ ರೇಣುಕಾ ಗ್ರಾಮಸ್ಥರೊಂದಿಗೆ ಮಾತನಾಡಿದರು. ಪತ್ರದಲ್ಲಿ ಬರೆದಿರುವಂತೆ ಅಂಡರ್‌ಪಾಸ್, ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ರೈತ ಸಂಘದ ನಾಯಕರಾದ ಹೊನ್ನೂರು ಬಸವಣ್ಣ, ವಿಜಯ್‌ಕುಮಾರ್ ಹೆಗ್ಗೋಠಾರ, ಮೇಲಾಜಿಪುರ ಕುಮಾರ್ ಮತ್ತು ಪಣ್ಯದಹುಂಡಿ, ಸುತ್ತಮುತ್ತಲ ಗ್ರಾಮಸ್ಥರು ಇದ್ದರು.