ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕೇಬಲ್ ಕದಿಯಲು ಬಂದಿದ್ದ ಆರೋಪಿಗಳು.
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕೇಬಲ್ ಕದಿಯಲು ಬಂದಿದ್ದ ಆರೋಪಿಗಳು.
Published on
ಗುಂಡ್ಲುಪೇಟೆ: ರೈತರ ಜಮೀನುಗಳಲ್ಲಿ ರಾತ್ರಿ ವೇಳೆ ಕೇಬಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಗ್ರಾಮಸ್ಥರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಶನಿವಾರ ಗ್ರಾಮಕ್ಕೆ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದರ ಬಗ್ಗೆ ಅರಿವಿದ್ದ ಮೈಸೂರು ಮೂಲದ ಕಳ್ಳರು ಗೋಪಾಲಪುರ ಗ್ರಾಮದ ಸ್ವಾಮಿ ಹಾಗೂ ನಾಗಪ್ಪ ಎಂಬುವರ ಜಮೀನುಗಳಲ್ಲಿ ಕೇಬಲ್ ಕತ್ತರಿಸಿದ್ದರು. ಈ ವೇಳೆ ಜಮೀನಿಗೆ ಬಂದ ಅಕ್ಕಪಕ್ಕದ ಜಮೀನುಗಳ ರೈತರು ಆಟೋ ನೋಡಿ ಸಂಶಯದಿಂದ ಅಲ್ಲಿದ್ದ ನಾಲ್ವರನ್ನು ಹಿಡಿದು ಪಟ್ಟಣದ ಪೊಲೀಸರ ವಶಕ್ಕೆ ನೀಡಿದರು.
ಮೈಸೂರು ಮೂಲದ ಕಿರಣ್, ಚಂದ್ರು, ಸಲೀಂ ಪಾಷ, ಸಾಹಿಲ್ ಎಂಬ ಆರೋಪಿಗಳಲ್ಲಿ ಇಬ್ಬರು ಬಾಲಪರಾಧಿಗಳು ಇದ್ದಾರೆ. ರಂಗಸ್ವಾಮಿ ಎಂಬುವರು ನೀಡಿದ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಪರಾಧಿಗಳನ್ನು ಬಾಲಮಂದಿರಕ್ಕೆ ಕಳಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net