12ರಿಂದ 14 ರವರೆಗೆ ಭೀಮನಗರದಲ್ಲಿ ವಿವಿಧ ಕಾರ್ಯಕ್ರಮ

 ಎಸ್.ಆನಂದ ಮೂರ್ತಿ
ಎಸ್.ಆನಂದ ಮೂರ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ ಮಾಹಿತಿ
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಏ.12ರಿಂದ 14 ರವರೆಗೆ ಭೀಮನಗರದಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ ಹೇಳಿದರು.
ಭೀಮನಗರದ ಟೌನ್‌ನ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ, ಭೀಮನಗರ ಯಜಮಾನರು ಮತ್ತು ಕುಲಸ್ಥರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭೀಮನಗರದ ಬಸವನಗುಡಿ ಬಳಿ ಭೀಮನಗರದ ವೈದ್ಯರ ಬಳಗದಿಂದ ಏ.12ರಂದು ಬೆಳಗ್ಗೆ 9 ರಿಂದ 2 ಗಂಟೆವರೆಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಮಾತೆ ಸಾವಿತ್ರಿಬಾಯಿ ಫುಲೆ ರಂಗಮಂದಿರದ ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏ.13ರಂದು ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ರೈಸ್ ಮಿಲ್ ಬಳಿಯ ಆದಿ ಕರ್ನಾಟಕ ಜನಾಂಗದ ಮೈದಾನದಲ್ಲಿ ಸಂಜೆ 6ಗಂಟೆಗೆ ‘ಸುವ್ವಿ ಸುವ್ವಮ್ಮ ಲಾಲಿ’ ಬುದ್ಧನ ಜೀವನ ಆಧಾರಿತ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ. ಏ.14 ರಂದು ಭೀಮನಗರ, ಜಿ.ಪಿ.ಮಲ್ಲಪ್ಪಪುರಂನಲ್ಲಿ ರಂಗೋಲಿ ಸ್ಪರ್ಧೆ, ನಂತರ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ಆದಿಕರ್ನಾಟಕ ಜನಾಂಗದ ಮೈದಾನದಲ್ಲಿ ಉಪನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಬೆಂಗಳೂರು ಸಿಸಿಬಿ ನಾರ್ಕೋಟಿಕ್ಸ್ ವಿಭಾಗದ ಉಪ ಪೊಲೀಸ್ ಆಯುಕ್ತ ಎಸಿಪಿ ಎಚ್.ಕೆ.ಮಹಾನಂದ, ಎಎಸ್‌ಐ ಎಸ್.ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಭೀಮನಗರದ ಯಜಮಾನ ವರದರಾಜು ಮಾತನಾಡಿ, ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ 3 ದಿನದ ಕಾರ್ಯಕ್ರಮಕ್ಕೆ ವಿವಿಧ ಗ್ರಾಮಗಳ ಮುಖಂಡರು, ಯಜಮಾನರನ್ನು ಆಹ್ವಾನಿಸಲಾಗುತ್ತಿದೆ. ಜನಪ್ರತಿನಿಧಿಗಳಾದ ಸಂಸದ ಸುನಿಲ್‌ಬೋಸ್, ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಎನ್.ಮಹೇಶ್ ಸೇರಿದಂತೆ ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಭೀಮನಗರದ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ವರದರಾಜು, ಕೆ.ಕೆ.ಮೂರ್ತಿ, ಸಿ.ಸಾವಕಯ್ಯ, ಸುರೇಶ್, ಮಾಜಿ ಯಜಮಾನರಾದ ನಟರಾಜು, ಪುಟ್ಟಸ್ವಾಮಿ, ಮಹದೇವ ಸ್ವಾಮಿ, ಸನತ್‌ಕುಮಾರ್, ಪಿ.ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ಚಂದ್ರು, ಮುಖಂಡ ಶಿವಮೂರ್ತಿ, ಎಸ್.ಸಿದ್ದಪ್ಪಾಜಿ, ದಿಲೀಪ್, ಶಂಕರ್ ಚೇತನ್, ಬೆಂಜಮೀನ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net