ಒಂದೇ ಮಾತರಂ ಗೀತೆಗೆ ಅಪಮಾನ ಸಲ್ಲದು

17ಕೆಜಿಎಲ್-2 ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಕೊಳ್ಳೇಗಾಲ ಬಿಜೆಪಿ ಮಂಡಲ ಕಾರ್ಯ ಕರ್ತರು ಗುರುವಾರ ಗ್ರೇಡ್ ತಹಸೀಲ್ದಾರ್ ರಮೇಶ   ಅವರಿಗೆ ಮನವಿ ಪತ್ರ ಸಲ್ಲಿಸಿ ದರು. ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಬಾಲರಾಜು ಇತರರು ಇದ್ದರು.
17ಕೆಜಿಎಲ್-2 ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಕೊಳ್ಳೇಗಾಲ ಬಿಜೆಪಿ ಮಂಡಲ ಕಾರ್ಯ ಕರ್ತರು ಗುರುವಾರ ಗ್ರೇಡ್ ತಹಸೀಲ್ದಾರ್ ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿ ದರು. ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಬಾಲರಾಜು ಇತರರು ಇದ್ದರು.
Published on
ಕೊಳ್ಳೇಗಾಲ : ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಬೇಕೆಂದು ಕೊಳ್ಳೇಗಾಲ ಬಿಜೆಪಿ ಮಂಡಲ ಕಾರ್ಯ ಕರ್ತರು ಗುರುವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇಡೀ ಭಾರತವನ್ನು ಒಗ್ಗೂಡಿಸಲು, ಬ್ರಿಟಿಷರ ಗುಲಾಮ ಗಿರಿಯಿಂದ ಬಿಡಿಸಿ ಕೊಳ್ಳಲು ವಂದೇ ಮಾತರಂ ಗೀತೆ ಶಕ್ತಿ ತುಂಬಿತ್ತು. ಇಂದಿಗೆ ಈ ಗೀತೆಗೆ 150 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ವಂದೇ ಮಾತರಂ ಗೀತೆಯನ್ನು
ರಾಷ್ಟ್ರ ಗಾನವನ್ನಾಗಿ ಮಾಡಿ ಸರ್ಕಾರಿ, ಸರ್ಕಾರೇತರ ಕಾರ್ಯಕ್ರಮದಲ್ಲಿ ಹಾಡಬೇಕೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವಂದೇ ಮಾತರಂ ಗೀತೆಯಲ್ಲಿ 6 ಚರಣ ಇದೆ. ಅವೆಲ್ಲವೂ ದೇಶ ಭಕ್ತಿ ಮತ್ತು
ದೇಶ ಪ್ರೇಮವನ್ನು ಪ್ರೇರೇಪಿಸುವ ಪದಗಳನ್ನು ಹೊಂದಿದೆ.
ರಾಷ್ಟ್ರವನ್ನು ಮರುನಿರ್ಮಾಣ ಮಾಡುವ ನಿಟ್ಟಿನಲ್ಲಿ ವಂದೇ ಮಾತರಂ ಗೀತೆಯನ್ನು ದೇಶದ 146 ಕೋಟಿ ಜನರು ಸಂಪೂರ್ಣವಾಗಿ ಹಾಡಿ ಬೆಂಬಲಿಸಬೇಕು ಎಂದರು.
ಕೇಂದ್ರ ಸರ್ಕಾರ ಆದೇಶವನ್ನು ಎಲ್ಲ ರಾಜ್ಯಗಳೂ ಅನುಸರಿಸಬೇಕು.
ಆದರೆ ರಾಜ್ಯ ಸರ್ಕಾರ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಕಡೆ ಎರಡು ಚರಣವನ್ನು ಹಾಡ ಬೇಕೆಂಬ ಆದೇಶವನ್ನು ಮಾಡಿದೆ. ಈ ನಿಲ್ಲುವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಿದೆ. ಹಾಗಾಗಿ ವಂದೇ ಮಾತರಂ ಗಾಯನದ ಗೌರವವನ್ನು ಎತ್ತಿ ಹಿಡಿಯಲು ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶ ರದ್ದಾಗಬೇಕು ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಬೂದಿತಿಟ್ಟು ಶಿವಕು ಮಾರ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಇತರರು ಇದ್ದರು.
======
ಪ್ರಧಾನಿ ಜನ್ಮದಿನಾಚರಣೆಗೆ ವಿಶೇಷ ಪೂಜೆ
ಕೊಳ್ಳೇಗಾಲ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗುರುವಾರ ಪಟ್ಟಣದ ಶ್ರೀ ಮರಳೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಯನ್ನು ಸಲ್ಲಿಸಿದರು. ಬಳಿಕ ನೆರೆದಿದ್ದ ಜನರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಮಾಜಿ ಸಚಿವ ಎನ್.ಮಹೇಶ್ ಈ ಸಂದರ್ಭ ಮಾತನಾಡಿ, ನರೇಂದ್ರ ಮೋದಿ ಅವರು 4ನೇ ಬಾರಿ ಪ್ರಧಾನಮಂತ್ರಿಯಾಗಿ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡಲೆಂದು ಪ್ರಾರ್ಥನೆ ಮಾಡಲಾಗಿದೆ ಎಂದರು. ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಈ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಅನೇಕ ಸಾಧನೆ ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ನಟರಾಜೇಗೌಡ, ರಾಜಶೇಖರ್ ಮೂರ್ತಿ, ವಕೀಲ ಬಸವರಾಜು, ಸೋಮಣ್ಣ ಉಪ್ಪಾರ್, ಸೋಮ ರಾಜ್, ರಾಜೇಶ್, ಮಮತಾ ಬದರೀನಾಥ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net