ಓಕುಳಿ ಆಟದೊಂದಿಗೆ ಯುಗಾದಿ ಆಚರಣೆ

ಮಂಗಲ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಕೋಣನ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
ಮಂಗಲ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಕೋಣನ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
Published on
ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಗುರುವಾರ ಕೋಣನ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಹಾಗೂ ಶುಕ್ರವಾರ ಓಕುಳಿ ಆಟದೊಂದಿಗೆ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಯುಗಾದಿ ಹಬ್ಬದ ಅಂಗವಾಗಿ ಗುರುವಾರ ಗ್ರಾಮದ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಮಧ್ಯಾಹ್ನ ಅರ್ಚಕರು ಹಾಗೂ ಗ್ರಾಮಸ್ಥರು ದೇಗುಲದಿಂದ ಸತ್ತಿಗೆ, ಸೂರಿಪಾನಿ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ನೀರಿನ ಆಸರೆಯಿರುವ ಸ್ಥಳಕ್ಕೆ ತೆರಳಿ ನೀರು ತುಂಬಿದ ಕುಂಭ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಕುಂಭ ಕಳಸವನ್ನು ಹೆಣ್ಣು ಮಕ್ಕಳು ಮೆರವಣಿಗೆಯಲ್ಲಿ ಮುಖ್ಯ ರಸ್ತೆಯ ಮೂಲಕ ಶ್ರೀ ಕೋಣನ ಮಾರಮ್ಮನ ದೇಗುಲಕ್ಕೆ ಆಗಮಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net