ಚಾಲಕ ಸೇರಿದಂತೆ ಬೆಂಗಳೂರು ಮೂಲದ ಐವರು ಶ್ರೀ ಮಲೆ ಮಹದೇಶ್ವರ.ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದು, ದೇವರ ದರ್ಶನ ಪಡೆದು ಬೆಳಗ್ಗೆ 7ಗಂಟೆಯಲ್ಲಿ ಹಿಂತಿರುತ್ತಿದ್ದರು. ಈ ವೇಳೆ ಎಲ್ಲೇಮಾಳ ಮಾರ್ಗದ ಅರಣ್ಯ ಇಲಾಖೆಯ ಹಳೆ ನರ್ಸರಿ ಬಳಿ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಸೇತುವೆಯ ಹಳ್ಳಕ್ಕೆ ನುಗ್ಗಿದೆ. ಪರಿಣಾಮ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಇನ್ನುಳಿದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.