ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ವಿನಯ್ ಮಾತನಾಡಿ, ತಿರುವುಗಳು ಕೃತಿಯಲ್ಲಿ ತಳಮಟ್ಟದ ಜನರ ಬದುಕು, ಶ್ರೀಸಾಮಾನ್ಯನ ನೋವುನಲಿವುಗಳು, ಗ್ರಾಮೀಣಪರಿಸರದ ನಾನಾ ಮಜಲುಗಳು ಅನಾವರಣಗೊಂಡಿವೆ. ಲೇಖಕಿಯವರು ತಾವು ಹುಟ್ಟಿಬೆಳೆದ ಗ್ರಾಮೀಣಪರಿಸರ, ನೆರೆಯವರೊಂದಿಗಿನ ಒಡನಾಟ, ತಮ್ಮ ಕಷ್ಟಕಾರ್ಪಣ್ಯದ ದಿನಗಳು, ಅದನ್ನು ಎದುರಿಸಿದ ಬಗೆ, ಹೆಣ್ಣುಮಕ್ಕಳು ಎಂದಿಗೂ ನಿರಾಶವಾದಿಗಳಲ್ಲ, ಅವರು ಕೂಡಾ ಆಶಾವಾದಿಗಳು ಎಂಬ ದೊಡ್ಡಸಂದೇಶವನ್ನು ಕೃತಿಯಲ್ಲಿ ಸಾರಿದ್ದಾರೆ ಎಂದರು.