ಚಾಮರಾಜನಗರ ಜಿಲ್ಲಾ ಕೇಂದ್ರದ ಎಪಿಎಂಸಿಯಲ್ಲಿ ಅರಿಶಿಣ ಮಾರಾಟ ಕೇಂದ್ರವಿದ್ದು, ಪ್ರತಿ ವರ್ಷವೂ ಹನೂರು, ಕೊಳ್ಳೇಗಾಲ ತಾಲೂಕಿನ ರೈತರು ಅರಿಶಿಣವನ್ನು ಮಾರಾಟ ಮಾಡಲು ಚಾಮರಾಜನಗರಕ್ಕೆ ಕೊಂಡೊಯ್ಯಲು ಸಾವಿರಾರು ರೂ. ಸಾರಿಗೆ ಶುಲ್ಕದ ಬರೆ ಬೀಳುತ್ತಿದೆ. ಸಾಲ ಮಾಡಿ ಅರಿಶಿಣ ಬೆಳೆದ ರೈತ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ದೊರೆಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ದಲ್ಲಾಳಿಗಳಿಗೆ ಕಡಿಮೆ ಬೆಲೆಯಲ್ಲಿಯೇ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.