ಹನೂರು: ಶೂಟೌಟ್‌ನಲ್ಲಿ ಮೃತಪಟ್ಟ ಮೂವರಿಗೆ ಶುಕ್ರವಾರ ಸಂಜೆ ತಾಲೂಕಿನ ಮಾರ್ಟಳ್ಳಿ ಸಂತ ಲೂರ್ದು ಮಾತೆ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಜೆ 5.30ರ ವೇಳೆಯಲ್ಲಿ ಫಾದರ್ ವಿನ್ಸೆಂಟ್ ಅವರ ನೇತೃತ್ವ ಹಾಗೂ ಭಕ್ತರ ಸಮ್ಮುಖದಲ್ಲಿ ತಾಲೂಕಿನ ಲಾಸರ್ ದೊಡ್ಡಿಯ ಕುಮಾರ್, ಮರಿಯಮಂಗಲ ಗ್ರಾಮದ ಅಂತೋಣಿ ಸ್ವಾಮಿ ಹಾಗೂ ಜಗನ್ನಾಥದೊಡ್ಡಿಯ ಜಾನ್ ರೋಸ್ ಪೀಟರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಚರ್ಚ್ ಸುತ್ತಲೂ ಮೇಣದ ಬತ್ತಿ ಬೆಳಗಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.