ಶಾಲಾ ಪ್ರವೇಶ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಲು ತರಬೇತಿ

ಯಳಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಜವಾಹರ್ ನವೋದಯ ಕೋಚಿಂಗ್ ತರಬೇತಿ ಕೇಂದ್ರವನ್ನು ಎಚ್.ಬಿ. ಸಂಪತ್‌ಕುಮಾರ್ ಉದ್ಘಾಟಿಸಿದರು. ಡಾ.ಪ್ರೇಮಾ. ಅಮ್ಮನಪುರ ಮಹೇಶ್ ಇತರರು ಇದ್ದರು.
ಯಳಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಜವಾಹರ್ ನವೋದಯ ಕೋಚಿಂಗ್ ತರಬೇತಿ ಕೇಂದ್ರವನ್ನು ಎಚ್.ಬಿ. ಸಂಪತ್‌ಕುಮಾರ್ ಉದ್ಘಾಟಿಸಿದರು. ಡಾ.ಪ್ರೇಮಾ. ಅಮ್ಮನಪುರ ಮಹೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುಪಮ ಸೇವಾ ಟ್ರಸ್ಟ್ ಡಾ.ಪಿ. ಪ್ರೇಮಾ ಹೇಳಿಕೆ
  • ಯಳಂದೂರಲ್ಲಿ ಕೋಚಿಂಗ್ ಕೇಂದ್ರದ ಉದ್ಘಾಟನೆ
ಯಳಂದೂರು: ಅನುಪಮ ಸೇವಾ ಟ್ರಸ್ಟ್‌ನಿಂದ ಜಿಲ್ಲಾದ್ಯಂತ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಉಚಿತವಾಗಿ ತರಬೇತಿ ಹಾಗೂ ಅನೇಕ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ನೂರಾರು ಜನರಿಗೆ ಸಹಾಯವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಡಾ.ಪಿ. ಪ್ರೇಮಾ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಜವಾಹರ್ ನವೋದಯ ಕೋಚಿಂಗ್ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಮಕ್ಕಳಿಗೆ ಉಚಿತವಾಗಿ ನವೋದಯ, ಆದರ್ಶ, ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಇತರ ಶಾಲೆಗಳ ಪ್ರವೇಶ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ಉದ್ದೇಶದಿಂದ ಕೋಚಿಂಗ್ ಸೆಂಟರ್ ತೆರೆಯುತ್ತಿದ್ದೇವೆ. ಇದರಿಂದ ತಾಲೂಕಿನ ಬಡ ಮಕ್ಕಳಿಗೆ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನುರಿತ ಶಿಕ್ಷಕರಿಂದ ತರಬೇತಿ ನೀಡುವುದರಿಂದ ಹೆಚ್ಚಿನ ಅವಕಾಶಗಳು ಸಿಗಲಿದೆ ಎಂದು ತಿಳಿಸಿದರು.
ನವದೆಹಲಿಯ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್.ಬಿ.ಸಂಪತ್‌ಕುಮಾರ್ ಮಾತನಾಡಿ, ನವೋದಯ ಶಾಲೆಗೆ ಪ್ರತಿ ವರ್ಷ ಕೇವಲ 80 ಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ. ಇದಕ್ಕೆ ಮಕ್ಕಳನ್ನು ಸಜ್ಜುಗೊಳಿಸುವ ಕೆಲಸವನ್ನು ಮಾಡುವುದು ಸವಾಲಾಗಿದೆ. ಗ್ರಾಮೀಣ ಬಡ ಮಕ್ಕಳಿಗೆ ಇಂತಹ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿರುವ ಶ್ಲಾಘನೀಯ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್ ಮಾತನಾಡಿ, ನುರಿತ ಶಿಕ್ಷಕರು ಪ್ರತಿ ಭಾನುವಾರ ತರಬೇತಿ ನೀಡುತ್ತಿದ್ದು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಉಪನ್ಯಾಸಕ ನಂಜುಂಡಯ್ಯ, ಶಿಕ್ಷಕ ಎಸ್.ನಂಜುಂಡಸ್ವಾಮಿ, ಶಿಕ್ಷಕ ಎಂ.ನಿಂಗರಾಜು, ಜಿ.ಎನ್.ಬಸವಣ್ಣ, ಮದ್ದೂರು ಚಕ್ರವರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net