ಈ ವೇಳೆ ಸಿರಿಧಾನ್ಯ ಸಂಶೋಧನಾ ಯೋಜನೆಯ ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಸಿ.ಎಂ.ಸುನೀಲ್ ಅವರು ಸಿರಿಧಾನ್ಯಗಳ ಸುಧಾರಿತ ಬೇಸಾಯ ಪದ್ಧತಿ, ಬೀಜೋಪಚಾರ, ಸಮತೋಲನ ಪೋಷಕಾಂಶ ನಿರ್ವಹಣೆ, ತೇವಾಂಶ ಸಂರಕ್ಷಣೆ, ಸೂಕ್ಷ್ಮ ಜೀವಿಗಳ ಸಮೂಹ ಬಳಕೆ, ಅಂತರ ಬೆಳೆ ಪದ್ಧತಿಗಳ ಮಹತ್ವ, ಉತ್ಪಾದಕತೆ ಹೆಚ್ಚಳ, ಮಣ್ಣಿನ ಫಲವತ್ತತೆಯ ಸುಧಾರಣೆ, ಆದಾಯ ವೃದ್ಧಿ, ಪ್ರಸ್ತುತ ಮಳೆಯ ಕೊರೆತೆಗೆ ಅನುಗುಣವಾಗಿ ಬೆಳೆ ಯೋಜನೆ ಅಳವಡಿಸಿಕೊಳ್ಳುವುದು, ಬರ ಸಹಿಷ್ಣು ಬೆಳೆ, ತಳಿಗಳ ಆಯ್ಕೆ, ತೇವಾಂಶ ಸಂರಕ್ಷಣಾ ಕ್ರಮ ಹಾಗೂ ಪಯಾರ್ಯ ಬೆಳೆಗಳನ್ನು ಅಳವಡಿಸಿಕೊಳ್ಳುವ ವಿಧಾನವನ್ನು ತಿಳಿಸಿಕೊಟ್ಟರು.