ದೊಡ್ಡಬಳ್ಳಾಪುರ ಮೂಲದ ರಾಜು ಅವರ ಪುತ್ರ ಸುಬ್ಬು(35) ಮೃತ ಚಾಲಕ. ಉದ್ಯಮಿ ಮಧು ಅವರಿಗೆ ಸೇರಿದ ಕ್ವಾರಿಯಿಂದ ಕಲ್ಲನ್ನು ಮೇಲೆ ಸಾಗಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 50 ಅಡಿ ಆಳಕ್ಕೆ ಬಿದ್ದಿದೆ. ಈ ಬಗ್ಗೆ ಪಟ್ಟಣ ಪೊಲೀಸರು ಮೃತದೇಹವನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ.