ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಟಿಪ್ಪರ್ ಡಿಕ್ಕಿ

ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗೇಟ್ ಸಮೀಪ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ.   ಟಿಪ್ಪರ್ ಡಿಕ್ಕಿಯಿಂದ ಜಖಂ ಆಗಿರುವ ಕಾರು.
ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗೇಟ್ ಸಮೀಪ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ. ಟಿಪ್ಪರ್ ಡಿಕ್ಕಿಯಿಂದ ಜಖಂ ಆಗಿರುವ ಕಾರು.
Published on
ಗುಂಡ್ಲುಪೇಟೆ: ತಮಿಳುನಾಡಿನಿಂದ ಪಟ್ಟಣದತ್ತ ಬರುತ್ತಿದ್ದ ಕಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂ.ಸ್ಯಾಂಡ್ ತುಂಬಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಘಟನೆ ವಿವರ:
ಮಂಗಳವಾರ ಬೆಳಗ್ಗೆ 8.30ಕ್ಕೆ ಗೂಡಲೂರಿನಿಂದ ಪಟ್ಟಣಕ್ಕೆ ಬರುತ್ತಿದ್ದ ಕೇರಳ ಮೂಲದ ಕಾರಿಗೆ ಬಸವಾಪುರ ಗೇಟ್ ಸಮೀಪ ಓವರ್ ಲೋಡ್ ಎಂ.ಸ್ಯಾಂಡ್ ತುಂಬಿಕೊಂಡು ತಮಿಳುನಾಡಿನತ್ತ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆ ಬದಿಗೆ ಮಗುಚಿ ಬಿದ್ದಿದೆ.
ಕಾರಿನಲ್ಲಿದ್ದ ಪ್ರಯಾಣಿಕರಿಗೆ ಪೆಟ್ಟುಬಿದ್ದಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇನ್ನೂ ಯಾವುದೇ ದೂರು ಬಂದಿಲ್ಲ. ಬಂದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿಯಮಬಾಹಿರ ಓಡಾಟ;
ಕಳೆದ ತಿಂಗಳು ಚಿಕ್ಕತುಪ್ಪೂರು ಸಮೀಪ ಶಾಲಾ ಮಕ್ಕಳಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದ್ದ ಘಟನೆ ಮರೆಯುವ ಮೊದಲೇ ಕಾರಿಗೆ ಡಿಕ್ಕಿ ಹೊಡೆದಿರುವುದು ತಾಲೂಕಿನ ಜನತೆಯ ಆಕ್ರೋಶ ಹೆಚ್ಚಿಸಿದೆ.
ಘಟನೆ ನಂತರ ಶಾಸಕರು ಸುದ್ದಿಗೋಷ್ಟಿ ನಡೆಸಿ ಶಾಲಾ ಕಾಲೇಜು ಸಂದರ್ಭದಲ್ಲಿ ಟಿಪ್ಪರ್ ಸಂಚಾರ ನಿರ್ಬಂಧಿಸಲಾಗಿದೆ. ನಿಯಮ ಮೀರಿ ಸಂಚರಿಸುವ ವಾಹನಗಳನ್ನು ಜಪ್ತಿಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಮೂರು ದಿನಗಳ ನಂತರ ಗಣಿ ಇಲಾಖೆಯು ಶಾಲಾ ಕಾಲೇಜುಗಳ ಸಮಯವಾದ ಬೆಳಗ್ಗೆ 8ರಿಂದ 10.30 ಹಾಗೂ ಸಂಜೆ 4 ರಿಂದ 6 ಗಂಟೆವರೆಗೆ ಟಿಪ್ಪರ್ ಸಂಚಾರ ನಿರ್ಬಂಧಿಸಿತ್ತು. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ಟಿಪ್ಪರ್‌ಗಳು ಎಂದಿನಂತೆ ತಮ್ಮ ಚಾಳಿ ಮುಂದುವರೆಸುತ್ತಿವೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ಇವುಗಳ ನಿರ್ಬಂಧಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net