ಅಡುಗೆ ಅನಿಲ ಕೊರತೆ ಸಂದರ್ಭದಲ್ಲಿ ಸೌದೆ ವ್ಯಾಪಾರಿಗಳಿಗೆ ಹೋಟೆಲ್‌ಗಳಿಂದ ವ್ಯಾಪಾರ ಹೆಚ್ಚಳವಾಗುವ ನಂಬಿಕೆ ಇಲ್ಲ, ಬದಲಾಗಿ ಶುಭ-ಸಮಾರಂಭಗಳ ಮೇಲೆ ಭರವಸೆ ಇದೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ಹೋಟೆಲ್‌ಗಳು ನಿಯಮಿತವಾಗಿ ಸೌದೆ ಖರೀದಿಸುತ್ತಿವೆ. ಈ ಹೋಟೇಲ್‌ಗಳು ಸೌದೆ ಅಂಗಡಿಗೆ ಖಾಯಂ ಗಿರಾಕಿಗಳಾಗಿವೆ. ಆದರೆ ಅಡುಗೆ ಅನಿಲವನ್ನು ಮಾತ್ರ ಬಳಕೆ ಮಾಡುವ ಹೋಟೆಲ್‌ಗಳು ಸೌದೆ ಬಳಕೆ ಮಾಡಬೇಕಾದರೆ ಈಗ ಸೌದೆ ಒಲೆ ನಿರ್ಮಾಣ ಮಾಡಿಸಿಕೊಳ್ಳಬೇಕು. ಹೋಟೆಲ್ ಮಾಲೀಕರು ಇದರ ಬದಲಾಗಿ ಎಲೆಕ್ಟ್ರಿಕ್ ಇಂಡಕ್ಷನ್ ಸ್ಟೌಗಳಿಗೆ ಬಂಡವಾಳ ಹಾಕುತ್ತಾರೆಯೇ ಹೊರತು ಸೌದೆ ಒಲೆ ಕಟ್ಟಿಸುವುದು ಕಡಿಮೆ. ಶುಭ-ಸಮಾರಂಭಗಳ ಸ್ಥಿತಿ ಹೀಗಿಲ್ಲ. ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಸಿಗದಿದ್ದರೆ ಬಾಣಸಿಗರು ಸೌದೆ ಬಳಸುತ್ತಾರೆ. ಪ್ರಸ್ತುತ ಹಲವೆಡೆ ಜಾತ್ರಾ ಮಹೋತ್ಸವಗಳು, ಮದುವೆ, ನಾಮಕರಣ ಇನ್ನಿತರ ಶುಭ-ಸಮಾರಂಭಗಳು ನಡೆಯುತ್ತಿವೆ. ಈ ವೇಳೆ ಅಡುಗೆ ಮಾಡಲು ಸೌದೆಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ.