ಉತ್ಸವ ಮೂರ್ತಿಯನ್ನು ದೇವಾಲಯ ಸುತ್ತಲೂ ಪ್ರದಕ್ಷಿಣೆ ಮಾಡಲಾಯಿತು. ನೀಲಗಾರರ ಜಾಗಟೆ, ಡೊಳ್ಳು, ತಮಟೆ, ಕಂಸಾಳೆ ಸದ್ದಿನಲ್ಲಿ ಕುರುಬನಕಟ್ಟೆಯ ಚೆನ್ನಯ್ಯ-ಲಿಂಗಯ್ಯ ಕಂಡಾಯಗಳು, ಸತ್ತಿಗೆ, ಸೂರಾಪಾನಿ, ಛತ್ರಿ, ಚಾಮರ ಉತ್ಸವಕ್ಕೆ ಮೆರುಗು ನೀಡಿತು. ಸಾವಿರಾರು ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಬೆಳಗ್ಗಿನಿಂದ ಸಂಜೆವರೆಗೂ ಸಾವಿರಾರು ಭಕ್ತರು ಶ್ರೀ ಸಿದ್ದಪ್ಪಾಜಿ ಗದ್ದುಗೆಗೆ ಹೂ, ಹಣ್ಣು ಸಮರ್ಪಿಸಿದರು. ದೇವಾಲಯ ಮುಂಭಾಗ ಧೂಪ, ಕರ್ಪೂರ ಹಚ್ಚಿ ಭಕ್ತಿ ಮೆರೆದರು. ಬೆಳಗ್ಗಿನಿಂದ ರಾತ್ರಿವರೆವಿಗೂ ಸರತಿ ಸಾಲಿನ ಮೂಲಕ ಆಗಮಿಸಿ ದೇವರ ದರ್ಶನ ಪಡೆದರು.