ಗುಂಡ್ಲುಪೇಟೆ:ತಾಲೂಕಿನ ಮದ್ದೂರು ವಲಯದ ಕಾಡಂಚಿನ ಜಮೀನುಗಳಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾಕಾನೆ ನೆರವಿನಿಂದ ಕೂಂಬಿಂಗ್ ನಡೆಸಿತು.
ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಕಾಡಂಚಿನ ಚನ್ನಮಲ್ಲಿಪುರ, ಹೊಂಗಹಳ್ಳಿ, ಮದ್ದಯ್ಯನಹುಂಡಿ ಸುತ್ತಮುತ್ತಲಿನ ಜಮೀನುಗಳಲ್ಲಿ ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ಕೂಂಬಿಂಗ್ ಆರಂಭಿಸಿತು.
ಸದ್ಯ ಹುಲಿ ಜಮೀನುಗಳಿಗೆ ಬರದಂತೆ ಮಾಡಲು ಅರಣ್ಯ ಇಲಾಖೆ ಬಂಡೀಪುರದ ಸಾಕಾನೆ ಜಯಪ್ರಕಾಶ್ ಜತೆ ಹುಲಿ ಕಾಣಿಸಿಕೊಂಡಿದ್ದ ಜಮೀನುಗಳಲ್ಲಿ ಸಂಚರಿಸಿ ಕೂಂಬಿಂಗ್ ನಡೆಸಲಾಯಿತು. ಹುಲಿಯನ್ನು ಸೆರೆ ಹಿಡಿಯಬೇಕಾದಲ್ಲಿ ಇತರ ಸಾಕಾನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.