ಹಾಡಹಗಲೇ ಹುಲಿ ಸಂಚಾರ

ಗುಂಡ್ಲುಪೇಟೆ ತಾಲೂಕಿನ ಮುಕ್ತಿ ಕಾಲನಿಯ ಬಾಳೆ ಜಮೀನಿನಲ್ಲಿ ಅಡಗಿದ್ದ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಕೆ ಮಾಡಿರುವುದು.
ಗುಂಡ್ಲುಪೇಟೆ ತಾಲೂಕಿನ ಮುಕ್ತಿ ಕಾಲನಿಯ ಬಾಳೆ ಜಮೀನಿನಲ್ಲಿ ಅಡಗಿದ್ದ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಕೆ ಮಾಡಿರುವುದು.
Published on
ಗುಂಡ್ಲುಪೇಟೆ: ತಾಲೂಕಿನ ಮುಕ್ತಿ ಕಾಲನಿಯ ಜಮೀನಿನಲ್ಲಿ ಹಾಡಹಗಲೇ ಹುಲಿ ಸಂಚರಿಸುತ್ತಿರುವುದು ಸುತ್ತಲಿನ ಹಳ್ಳಿಗಳ ಜನರಿಗೆ ಆತಂಕವುಂಟು ಮಾಡಿದೆ.
ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಕಾಡಂಚಿನ ಮಹೇಶ, ಶಶಿ ಹಾಗೂ ಸ್ವಾಮಿ ಎಂಬುವರ ಬಾಳೆಯ ತೋಟಗಳಲ್ಲಿ ಭಾನುವಾರ ಬೆಳಗ್ಗೆ ಓಡಾಡುತ್ತಿದ್ದ ಹುಲಿ ಕಂಡ ಗ್ರಾಮಸ್ಥರು ಹಾಗೂ ಕಾರ್ಮಿಕರು ಭೀತಿಗೊಳಗಾದರು.
ಈ ಬಗ್ಗೆ ವಿಷಯ ತಿಳಿದ ಅರಣ್ಯ ಸಿಬ್ಬಂದಿ ಮಧ್ಯಾಹ್ನ ಸಾಕಾನೆ ನೆರವಿನಿಂದ ಹುಲಿ ಸೆರೆಗೆ ಕೂಂಬಿಂಗ್ ನಡೆಸಿತು. ಡ್ರೊನ್ ಕ್ಯಾಮರಾಗಳ ನೆರವಿನಿಂದ ಹುಲಿಯ ಜಾಡನ್ನು ಪತ್ತೆ ಹಚ್ಚಲಾಗಿದೆ. ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮುಕ್ತಿ ಕಾಲನಿಯ ಬಾಳೆ ಜಮೀನಿನಲ್ಲಿ ಅಡಗಿದ್ದ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಕೆ ಮಾಡಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net