

ಪ್ರಮುಖ ಮುಖ್ಯಾಂಶಗಳು
ಬೇಸಿಗೆ ಹಿನ್ನೆಲೆಯಲ್ಲಿ ಕೆರೆಗಳು ಬತ್ತಿ ಹೋಗುತ್ತಿವೆ. ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತಿದೆ. ಜಿಂಕೆಗಳು ನೀರಿನ ಮೂಲಗಳಿಗೆ ವಲಸೆ ಹೋಗದೆ ಸ್ಥಳೀಯ ಪ್ರದೇಶದ ಸುತ್ತಮುತ್ತ ನೀರು ಹುಡುಕಾಟ ಮಾಡುತ್ತವೆ. ಆಗ ಗ್ರಾಮಗಳಲ್ಲಿ ಕಾಣಿಸಿಕೊಂಡುಬಿಡುತ್ತವೆ.
— ಭಾಸ್ಕರ್, ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ
ಬೀದಿನಾಯಿಗಳ ಹಿಂಡು ಜಿಂಕೆಗಳಿಗಾಗಿ ಅಥವಾ ಜನರಿಗಾಗಿ ತೊಂದರೆ ಕೊಟ್ಟರೆ ಅವುಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತಕ್ಕೆ ತಿಳಿಸಬೇಕಾಗುತ್ತದೆ. ಗ್ರಾಮಗಳಲ್ಲಿ ಜಿಂಕೆ ಕಂಡರೆ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ.
— ಪ್ರಭಾಕರನ್, ನಿರ್ದೇಶಕ, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಗುಂಡ್ಲುಪೇಟೆ