ಜಿಲ್ಲೆಯಲ್ಲಿ 3,32,433 ಗೃಹ ಬಳಕೆ ಸಿಲಿಂಡರ್‌ಗಳಿದ್ದು, ಪಟ್ಟಣದಲ್ಲಿರುವ ಗ್ರಾಹಕರು 25 ದಿನಕ್ಕೊಂದು ಸಿಲಿಂಡರ್ ಬುಕ್ ಮಾಡಲು ಅವಕಾಶ ಮಾಡಿದೆ. ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ 45 ದಿನಕ್ಕೊಂದು ಸಿಲಿಂಡರ್ ನೀಡಲಾಗುತ್ತಿದೆ. ಸಿಂಗಲ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ 25 ದಿನಕ್ಕೊಂದು ಸಿಲಿಂಡರ್ ನೀಡಲು ಅವಕಾಶ ಮಾಡಲಾಗಿದೆ. ಗ್ರಾಹಕರು ಈ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಬುಕ್ಕಿಂಗ್ ಮಾಡಿದರೆ, ಮೂರ‌್ನಾಲ್ಕು ದಿನಗಳಲ್ಲಿ ಅವರ ಮನೆಗೆ ಸಿಲಿಂಡರ್ ತಲುಪಲಿದೆ ಎಂದು ತಿಳಿಸಿದರು.