ಕಾಳಿಕಾಂಬಾ ದೇಗುಲದಲ್ಲಿ ಕಳ್ಳತನ

ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಾಳಿಕಾಂಬಾ ದೇವಾಲಯ.
ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಾಳಿಕಾಂಬಾ ದೇವಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಗೋಲಕದ ಹಣ, ಚಿನ್ನಾಭರಣ ಕಳವು
ಗುಂಡ್ಲುಪೇಟೆ: ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ಕಳ್ಳರು ಕಾಳಿಕಾಂಬಾ ದೇವಾಲಯದ ಬಾಗಿಲು ಮುರಿದು ಗೋಲಕ ಕದ್ದೊಯ್ದಿದ್ದಾರೆ.
ಮಂಗಳವಾರ ತಡರಾತ್ರಿ ಗ್ರಾಮದ ವಿಶ್ವಕರ್ಮ ಜನಾಂಗದವರಿಗೆ ಸೇರಿದ ಕಾಳಿಕಾಂಬಾ ದೇವಾಲಯದ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಗೋಲಕ ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.
ಈ ಬಗ್ಗೆ ಗೋಲಕದಲ್ಲಿ ಸಂಗ್ರಹವಾಗಿದ್ದ 80 ಸಾವಿರ ರೂಪಾಯಿ, 25 ಸಾವಿರ ರೂ. ಮೌಲ್ಯದ ಬೆಳ್ಳಿಯ ಕಿರೀಟ, ಚಿನ್ನದ 4 ತಾಳಿಗಳು ಹಾಗೂ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 16 ಚಿನ್ನದ ಗುಂಡುಗಳು ಕಳ್ಳತನವಾಗಿವೆ ಎಂದು ಗ್ರಾಮದ ಗೋಪಾಲಾಚಾರಿ ಎಂಬುವರು ಪಟ್ಟಣದ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net