ನಲ್ಲಿ ನೀರಿನ ಮೀಟರ್‌ಗಳ ಕಳವು

ಕೊಳ್ಳೇಗಾಲ ಪಟ್ಟಣದ ಮರಡಿಗುಡ್ಡ ಪಕ್ಕದಲ್ಲಿರುವ ಕಂದಾಯ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ಆವರಣದಲ್ಲಿ ನಿರಂತರ ನೀರು ಸರಬರಾಜು ಯೋಜನೆಯಡಿ ಮನೆ ಮುಂಭಾಗ ಅಳವಡಿಸಿದ್ದ ನಲ್ಲಿಗಳ ಮೀಟರ್ ಕಳವು ಮಾಡಿರುವುದು.
ಕೊಳ್ಳೇಗಾಲ ಪಟ್ಟಣದ ಮರಡಿಗುಡ್ಡ ಪಕ್ಕದಲ್ಲಿರುವ ಕಂದಾಯ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ಆವರಣದಲ್ಲಿ ನಿರಂತರ ನೀರು ಸರಬರಾಜು ಯೋಜನೆಯಡಿ ಮನೆ ಮುಂಭಾಗ ಅಳವಡಿಸಿದ್ದ ನಲ್ಲಿಗಳ ಮೀಟರ್ ಕಳವು ಮಾಡಿರುವುದು.
Published on
ಕೊಳ್ಳೇಗಾಲ : ಪಟ್ಟಣದ ಮರಡಿಗುಡ್ಡ ಪಕ್ಕದಲ್ಲಿರುವ ಕಂದಾಯ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ಆವರಣದಲ್ಲಿ ಕೆಲ ದಿನಗಳಿಂದ 24*7 ನಿರಂತರ ನೀರು ಸರಬರಾಜು ಯೋಜನೆಯ ನಲ್ಲಿ ನೀರಿನ ಮೀಟರ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡುತ್ತಿದ್ದಾರೆ.
ಎರಡು ದಿನ ಹಿಂದೆ ವಸತಿ ಗೃಹ ನಿವಾಸಿಗಳಾದ ರಾಮಾಂಜನೇಯ ಮತ್ತು ರಾಜೇಶ್ ಎಂಬುವರ ಮನೆಯ ಮುಂದೆ ಅಳವಡಿಸಲಾಗಿದ್ದ ನಲ್ಲಿ ನೀರಿನ ಮೀಟರ್‌ಗಳನ್ನು ಕಳ್ಳತನ ಮಾಡಲಾಗಿತ್ತು.
ಶನಿವಾರ ರಾತ್ರಿ ಉಪ ವಿಭಾಗಧಿಕಾರಿ ಕಚೇರಿಯ ಶಿರಸ್ತೇದಾರ್ ರವಿಕುಮಾರ್ ಮತ್ತು
ಗ್ರಾಮ ಲೆಕ್ಕಾಧಿಕಾರಿ ಲಾವಣ್ಯಾ ಅವರ ಮನೆ ಮುಂಭಾಗವಿದ್ದ ಮೀಟರ್ ಬಾಕ್ಸ್
ಒಡೆದು ಮೀಟರ್ ಕಳವು ಮಾಡಲಾಗಿದೆ. ಮೀಟರ್ ಬಾಕ್ಸ್ ಒಡೆದು ಹಾಕಿದ ಶಬ್ದ ಕೇಳಿದ ನಿವಾಸಿಗಳು ಹೊರ ಬಂದಾಗ ದುಷ್ಕರ್ಮಿಗಳು ಪರಾರಿಯಾದರು. ಮಾಹಿತಿ ತಿಳಿದ ಪಟ್ಟಣ ಠಾಣೆ ಪೊಲೀಸರು ಭಾನುವಾರ ಸ್ಥಳಕ್ಕೆ ಆಗಮಿಸಿ ನಿವಾಸಿಗಳಿಂದ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಈ ಹಿಂದೆಯೂ ದುಷ್ಕರ್ಮಿಗಳು ಖಾಲಿ ನಿವೇಶನ ಹಾಗು ವಾಸದ ಮನೆಗಳಲ್ಲಿ ಅಳವಡಿಸಿರುವ ನೂರಾರು ನಲ್ಲಿ ಮೀಟರ್‌ಗಳನ್ನು ಕಳವು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪೊಲೀಸರು ಬಿಗಿ ಕ್ರಮ ವಹಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net