ವ್ಯಾಪಾರಕ್ಕೆ ಹಿಡಿದ ಗ್ರಹಣ: ಶಿವನಸಮುದ್ರ ಗ್ರಾಮದ ಭರಚುಕ್ಕಿ ಜಲಪಾತ, ಸತ್ತೇಗಾಲದಲ್ಲಿರುವ ಸಮೂಹ ದೇವಾಲಯಗಳು ಹ್ಯಾಂಡ್‌ಪೋಸ್ಟ್ ಹಾಗೂ ಶಿವನಸಮುದ್ರದ ಜನರಿಗೆ ವರದಾನವಾಗಿದೆ. ಮಳೆಗಾಲ ವ್ಯಾಪಾರಿಗಳಿಗೆ ಆರ್ಥಿಕ ಹಬ್ಬದಂತಿರುತ್ತದೆ. ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್‌ಗಳು, ಮೀನಿನ ಅಂಗಡಿ, ಹಣ್ಣುಗಳ ಅಂಗಡಿ, ಐಸ್‌ಕ್ರೀಂ ಅಂಗಡಿಯಲ್ಲಿ ಜನವೋ ಜನ. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗುತ್ತದೆ. ಆದರೆ ಕಳೆದ 2 ತಿಂಗಳನಿಂದ ನೀರಲ್ಲದ ಕಾರಣ ಫಾಲ್ಸ್ ವೀಕ್ಷಣೆಗೆ ಜನರು ಬರುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಗ್ರಹಣ ಹಿಡಿದಂತಾಗಿದೆ.