ಜಿಲ್ಲೆಯಲ್ಲಿ ತರಕಾರಿ ಬೆಳೆದಿರುವ ರೈತರು ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರಾಚ್ಯದ ಯುದ್ಧದ ಪ್ರಭಾವ ಕೃಷಿಯ ಮೇಲೂ ಪ್ರಭಾವ ಬೀರಿದೆ. ಹೋಟೇಲ್‌ಗಳಿಗೆ ಅಗತ್ಯವಿರುವ ವಾಣಿಜ್ಯ ಸಿಲಿಂಡರ್‌ಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಇದರಿಂದಾಗಿ ಆಹಾರ ತಯಾರಿಕೆಗೆ ತೊಂದರೆಯಾಗುತ್ತಿದೆ. ಕೆಲವು ಹೋಟೇಲ್‌ಗಳು ಇಂಡಕ್ಷನ್ ಸ್ಟೌ, ಸೌದೆ ಒಲೆಯ ಮೊರೆ ಹೋಗಿವೆ. ಇನ್ನುಳಿದವು ವಾಣಿಜ್ಯ ಸಿಲಿಂಡರ್ ಮೇಲೆ ಆಧಾರವಾಗಿವೆ. ಅಗತ್ಯವಿರುವಷ್ಟು ಸಿಲಿಂಡರ್ ಸಿಗದೆ ಇದ್ದಾಗ ಹೋಟೇಲ್ ನಡೆಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುವುದು ಕಡಿಮೆಯಾಗುತ್ತದೆ. ಈ ರೀತಿಯ ಪರಿಣಾಮದಿಂದಲೇ ತರಕಾರಿ ಬೆಳೆದಿರುವ ರೈತರಿಗೆ ಖರೀದಿದಾರರು ಸಿಗದೆ ಸಮಸ್ಯೆಯುಂಟಾಗಿದೆ. ಕೆಲವರು ಬೆಳೆಗಳನ್ನು ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದಾರೆ. ಇನ್ನು ಕೆಲವರು ಉಳುಮೆ ಮಾಡಿಬಿಡಲು ನಿರ್ಧರಿಸಿದ್ದಾರೆ.