ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್, ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ಮಹೇಶ್, ಎನ್‌ಟಿಸಿಎ ಪ್ರತಿನಿಧಿ ಟಿ. ಜಾನ್ ಪೀಟರ್ ಹಾಗೂ ಪಪಂ ಮಾಜಿ ಸದಸ್ಯ ಸಂಪತ್‌ಕುಮಾರ್ ಸಮ್ಮುಖದಲ್ಲಿ ಎನ್‌ಟಿಸಿಎ ಹಾಗೂ ಎಸ್‌ಒಪಿ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಚಿರತೆ ಮೃತ ದೇಹವನ್ನು ಸ್ಥಳದಲ್ಲಿಯೇ ಸುಡಲಾಯಿತು. ಚಿರತೆ ಸಾವಿಗೆ ನಿಖರ ಕಾರಣವನ್ನು ತಿಳಿಯಲು ಅಂಗಾಂಗದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.