

ಪ್ರಮುಖ ಮುಖ್ಯಾಂಶಗಳು
ಮಳೆ ಕಡಿಮೆ, ಅಂತರ್ಜಲದ ಅತಿಯಾದ ಬಳಕೆಯ ಪ್ರಮಾಣದಿಂದ ಜಲದಮಟ್ಟ ಕಡಿಯೆಯಾಗುತ್ತದೆ. ಹನೂರು ತಾಲೂಕಿನ ಭೂಭಾಗ ಶಿಲಾಪದರಗಳಿಂದ ಕೂಡಿವೆ. ಇದರಿಂದ ಅಂತರ್ಜಲ ಮರುಪೂರಣ ಪ್ರಮಾಣ ಕಡಿಮೆಯಾಗುತ್ತದೆ. ಅರಣ್ಯ ಪ್ರದೇಶದ ಬೆಟ್ಟ ಗುಡ್ಡಗಳ ಇಳಿಜಾರು ಪ್ರದೇಶದಲ್ಲಿ ಬಿದ್ದ ಮಳೆ ನೀರು ಇಂಗದೆ ಹರಿದು ಹೋಗುತ್ತದೆ. ಮಳೆಯಾದಾಗ ಕೆರೆ, ಕಟ್ಟೆಗಳು ಸಮರ್ಪಕವಾಗಿ ತುಂಬುವುದಿಲ್ಲ. ಆಗ ಅಂತರ್ಜಲ ಮಟ್ಟ ಕ್ಷೀಣಿಸುತ್ತದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೌಲಭ್ಯ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ 15.8 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ಸಮಸ್ಯೆ ಹೆಚ್ಚಾಗಿರುವ ಹನೂರು ತಾಲೂಕಿಗೆ ಶಾಸಕ ಎಂ.ಆರ್.ಮಂಜುನಾಥ್ ಅವರ ಕೋರಿಕೆಗೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಡಿಎಂಎ್ ಅನುದಾನದಲ್ಲಿ 70 ಲಕ್ಷ ರೂ. ಅನುದಾನ ಸಿಗುತ್ತಿದೆ.
ಮಹದೇಶ್ವರ ಬೆಟ್ಟದ ತೊಳಸಿಗೆರೆ ಗ್ರಾಮದಲ್ಲಿ ನಲ್ಲಿ ನೀರಿನ ಸೌಲಭ್ಯವಿಲ್ಲ. ಬೋರ್‌ವೆಲ್ ಇದ್ದು, ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಲ್ಲೇ ಸರಿದೂಗಿಸುತ್ತಿದ್ದೇವೆ. ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟರೆ ಅನುಕೂಲವಾಗಿದೆ.