ಕೆರೆಯ ನೀರನ್ನು ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕ

ಬೆಂಗಳೂರಿನಲ್ಲಿರುವ ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ ಅವರ ನಿವಾಸಕ್ಕೆ ಶನಿವಾರ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಭೇಟಿ ನೀಡಿ ಕೊಳ್ಳೇಗಾಲ ಕ್ಷೇತ್ರದ ಯಳಂದೂರು ತಾಲೂಕು ವ್ಯಾಪ್ತಿಯ ಅಗರ ಹಾಗೂ ಮದ್ದೂರು ಕೆರೆಯ ನೀರನ್ನು ಬೆಂಗಳೂರಿನ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಯೋಜನೆ ಬಗ್ಗೆ ಚರ್ಚಿಸಿದರು.

Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ.ಪಾಟೀಲ್ ಅವರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವರಿಕೆ
ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದ ಯಳಂದೂರು ತಾಲೂಕು ವ್ಯಾಪ್ತಿಯ ಅಗರ ಹಾಗೂ ಮದ್ದೂರು ಕೆರೆಯ ನೀರನ್ನು ಬೆಂಗಳೂರಿನ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕವಾಗಿದೆ. ಇದರಿಂದ ನಮ್ಮ ಭಾಗದ ರೈತರಿಗೆ ಅನುಕೂಲವಿಲ್ಲ. ಹಾಗಾಗಿ ಯೋಜನೆ ಮರು ಪರಿಶೀಲಿಸುವಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಮನವರಿಕೆ ಮಾಡಿದರು.
ಬೆಂಗಳೂರಿನಲ್ಲಿರುವ ಕೈಗಾರಿಕಾ ಸಚಿವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಚರ್ಚಿಸಿದರು. ತಾಲೂಕಿನ ಸರಗೂರು ಗ್ರಾಮದ ಕಾವೇರಿ ಯಿಂದ ಯಳಂದೂರು ತಾಲೂಕಿನ ಅಗರ ಮತ್ತು ಮದ್ದೂರು ಕೆರೆಯನ್ನು ತುಂಬಿಸಿ ಬೆಂಗಳೂರಿನ ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ನೀರನ್ನು ಕೊಂಡೊಯ್ಯುವುದರಿಂದ ಕ್ಷೇತ್ರದ ರೈತರ ಕೃಷಿಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಹಾಗಾಗಿ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಬೇಕು. ಈ ಸಂಬಂಧ ಸಭೆ ಕರೆದು ಸಾಧಕ -ಬಾಧಕವನ್ನು ಚರ್ಚಿಸಿ ಮರು ಪರಿಶೀಲನೆ ಮಾಡಬೇಕು. ಚಾಮರಾಜನಗರ ಸುವರ್ಣಾವತಿ, ಚಿಕ್ಕೋಳೆ ಜಲಾಶಯಗಳನ್ನು ತುಂಬಿಸಿದರೆ ನಮ್ಮ ಭಾಗದ ರೈತರಿಗೆ ಪ್ರಯೋಜನವಾಗಲಿದೆ. ಈ ಬಗ್ಗೆ ಕ್ರಮವಹಿಸುವಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಶಾಸಕ ಎ.ಆರ್. ಕೃಷ್ಣ ಮೂರ್ತಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net