ಹನೂರಿನಲ್ಲಿ ತಾಲೂಕು ಆಡಳಿತದ ವತಿಯಿಂದ ಸಂತ ಸೇವಾಲಾಲರ ಜಯಂತಿ ಆಚರಣೆ ನಡೆಯಿತು. ಕೆ.ಎನ್ ಚೈತ್ರಾ, ಮಾದೇಶ್, ಶಾಂತರಾಜು, ಮುನಿಯನಾಯಕ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಹಸೀಲ್ದಾರ್ ಕೆ.ಎನ್ ಚೈತ್ರಾ ಬಣ್ಣನೆ
ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ
ಹನೂರು: ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಿದರೆ ಮಾತ್ರ ಸಾಲದು. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆ ಎನಿಸುತ್ತದೆ ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ 287ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ಜಗದಾಂಬೆಯ ಆರಾಧಕರಾಗಿ ಬ್ರಹ್ಮಚರ್ಯವನ್ನು ಪಾಲನೆ ಮಾಡಿದ ಅಧ್ಯಾತ್ಮ ಚಿಂತಕರು. ಬಂಜಾರ ಸಮುದಾಯದಲ್ಲಿ ಶ್ರೇಷ್ಠರಾಗಿದ್ದು, ಗುರುವಿನ ಸ್ಥಾನ ಪಡೆದಿದ್ದಾರೆ. ಇವರು ಒಬ್ಬ ದನಗಾಯಿಯಾಗಿ ಪಶುಪಾಲನೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಅಂದಿನ ಕಾಲದಲ್ಲಿಯೇ ತಮ್ಮ ಜೀವನದ ಅನುಭವವನ್ನು ತತ್ವದ ಮೂಲಕ ತಿಳಿಸಿ ಜನರಲ್ಲಿದ್ದ ಮೂಢನಂಬಿಕೆ ಹಾಗೂ ಅಜ್ಞಾನವನ್ನು ದೂರ ಮಾಡಿದ್ದರು. ಜತೆಗೆ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರುವ ಮೂಲಕ ಅಜ್ಞಾನ ಲೋಕಕ್ಕೆ ಮುಕ್ತಿ ತೋರಿದ ದಾರ್ಶನಿಕ. ಆದ್ದರಿಂದ ಇವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕ. ಈ ದೆಸೆಯಲ್ಲಿ ಸರ್ಕಾರದ ವತಿಯಿಂದ ಇವರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಶಿರಸ್ತೇದಾರರಾದ ಮಾದೇಶ್, ನಾಗೇಂದ್ರ, ಬಂಜಾರ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಮುನಿಯನಾಯಕ, ಮುಖಂಡರಾದ ಗಂಗಾಧರ್, ಮಾಧುನಾಯ್ಕ, ಕುಮಾರ್, ಗೋವಿಂದ, ಬಾಲುನಾಯ್ಕ, ಗೋಪಾಲ, ಜಯಬಾಯಿ, ಲಕ್ಷ್ಮೀ ಬಾಯಿ ಇತರರಿದ್ದರು.