ಸ್ನೇಹಿತರಾದ ದೇವರಾಜು, ಲೋಕೇಶ್, ಕಿರಣ್‌ಮೂರ್ತಿ ಹಾಗೂ ಮಧು ಅವರ ಜತೆಗೂಡಿ ಶಶಿಕುಮಾರ್ ಮಧ್ಯಾಹ್ನ ಹೊಗೇನಕಲ್ ಫಾಲ್ಸ್‌ನಲ್ಲಿ ಈಜಲು ನದಿಗೆ ಇಳಿದಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿ ಕಣ್ಮರೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮ.ಬೆಟ್ಟ ಪೊಲೀಸರು ಮಾಹಿತಿ ಪಡೆದು ನಾಪತ್ತೆಯಾದವನ ಪತ್ತೆಗೆ ಹುಡುಕಾಟ ನಡೆಸಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.