ಜೋರು ಮಳೆಯಿಂದ ಮನೆ ಮಾಡಿದ ಸಂತಸ

ಒಡೆಯಪಾಳ್ಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಜೋರು ಮಳೆಯಾಯಿತು.
ಒಡೆಯಪಾಳ್ಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಜೋರು ಮಳೆಯಾಯಿತು.
Published on
ಹನೂರು: ತಾಲೂಕಿನ ಒಡೆಯರಪಾಳ್ಯ ಭಾಗದಲ್ಲಿ ಶುಕ್ರವಾರ ಸುಮಾರು ಒಂದು ಗಂಟೆ ಕಾಲ ಗಾಳಿ ಸಹಿತ ಜೋರು ಮಳೆ ಸುರಿದಿದ್ದು, ರೈತರಲ್ಲಿ ಸಂತಸ ಉಂಟು ಮಾಡಿದೆ.
ಬಿಸಿಲಿನ ಬೇಗೆ ಹೆಚ್ಚಿದ್ದ ಈ ಭಾಗಕ್ಕೆ ಕಳೆದ 2 ದಿನದ ಹಿಂದೆ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ಜನತೆಗೆ ತಂಪು ಅನುಭವವನ್ನು ನೀಡಿತ್ತು. ಶುಕ್ರವಾರ ಬೆಳಗ್ಗೆ ಬಿಸಿಲಿನ ತೀವ್ರತೆ ಎಂದಿನಂತೆ ಇತ್ತು. ಮಧ್ಯಾಹ್ನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು 3 ಗಂಟೆಯಲ್ಲಿ ಆರಂಭವಾದ ಗಾಳಿ ಸಹಿತ ಜೋರು ಮಳೆ ಒಡೆಯರಪಾಳ್ಯ ಸೇರಿದಂತೆ ಹೊಸಪಾಳ್ಯ, ಗುಂಡಿಮಾಳ, ಬೈಲೂರು, ಹುಣಸೆಪಾಳ್ಯ, ಅರ್ಧನಾರಿಪುರ ಸೇರಿದಂತೆ ಇತರ ಕಡೆಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು. ಈ ಭಾಗದಲ್ಲಿ ಈಗಾಗಲೇ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಸುರಿದ ಮಳೆಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರು ನಿಟ್ಟುಸಿರು ಬಿಟ್ಟಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net