ಗಾಯಗೊಂಡಿದ್ದ ಗಂಡಾನೆ ಮೃತ

ಗೋಪಿನಾಥಂ ಜಲಾಶಯದಲ್ಲಿ ಮೃತಪಟ್ಟ ಗಂಡಾನೆ.
ಗೋಪಿನಾಥಂ ಜಲಾಶಯದಲ್ಲಿ ಮೃತಪಟ್ಟ ಗಂಡಾನೆ.
Published on
ಹನೂರು: ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂ ಜಲಾಶಯದಲ್ಲಿ ಗಾಯಗೊಂಡಿದ್ದ ಗಂಡಾನೆ ಶುಕ್ರವಾರ ಮೃತಪಟ್ಟಿದೆ.
ಈ ಕಾಡಾನೆಯು ನೀರು ಕುಡಿಯಲು ಗೋಪಿನಾಥಂ ಜಲಾಶಯಕ್ಕೆ ಆಗಮಿಸುತ್ತಿತ್ತು. ಆದರೆ 5 ದಿನದ ಹಿಂದೆ ಜಲಾಶಯಕ್ಕೆ ಆಗಮಿಸಿದ್ದ ಕಾಡಾನೆ ನಿಂತಲ್ಲೇ ನಿಂತಿತ್ತು. ಸ್ಥಳೀಯರು ಆನೆಯು ಗಾಯಗೊಂಡಿರಬಹುದು ಎಂದು ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಬಳಿಕ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಓಡಿಸಿದ್ದರು. ಆದರೆ ಶುಕ್ರವಾರ ನದಿ ಪಾತ್ರದಲ್ಲಿ ಗಾಯಗೊಂಡಿದ್ದ ಗಂಡಾನೆ ಮೃತಪಟ್ಟಿದೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದರು.
ಆತಂಕ ವ್ಯಕ್ತ: ತಾಲೂಕಿನ ಅಜ್ಜೀಪುರ ಸಮೀಪದ ಉಡುತೊರೆಹಳ್ಳ ಜಲಾಶಯದಲ್ಲಿ ಏ.22 ರಂದು ನೀರು ಕುಡಿಯಲು ಆಗಮಿಸಿ ಕೆಸರಿಗೆ ಸಿಲುಕಿ ಅಸ್ಥಸ್ಥಗೊಂಡಿದ್ದ ಹೆಣ್ಣಾನೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಗೋಪಿನಾಥಂ ಜಲಾಶಯದಲ್ಲಿ ಗಂಡಾನೆಯೊಂದು ಮೃತಪಟ್ಟಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net