ದೂರದೃಷ್ಟಿಯ ಮಹಾ ನಾಯಕ ಮುಮ್ಮಡಿ ಕೃಷ್ಣರಾಜ ಒಡೆಯರ್

ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಮಂಗಳವಾರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಹಾಗೂ ಮೈಸೂರು ಸಂಸ್ಥಾನದ ಕೊಡುಗೆಗಳ ಕುರಿತ ಕಾರ್ಯಕ್ರಮ ನಡೆಯಿತು. ಬಿ.ಕೆ.ಆರಾಧ್ಯ, ಶಿವಲಿಂಗಮೂರ್ತಿ, ಸರಸ್ವತಿ, ಮಹಮದ್ ಗೌಸ್, ಹರದನಹಳ್ಳಿ ಮದನ್‌ಕುಮಾರ್ ಹಾಜರಿದ್ದರು.
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಮಂಗಳವಾರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಹಾಗೂ ಮೈಸೂರು ಸಂಸ್ಥಾನದ ಕೊಡುಗೆಗಳ ಕುರಿತ ಕಾರ್ಯಕ್ರಮ ನಡೆಯಿತು. ಬಿ.ಕೆ.ಆರಾಧ್ಯ, ಶಿವಲಿಂಗಮೂರ್ತಿ, ಸರಸ್ವತಿ, ಮಹಮದ್ ಗೌಸ್, ಹರದನಹಳ್ಳಿ ಮದನ್‌ಕುಮಾರ್ ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಾರ್ಯಕ್ರಮ
  • ಅಧ್ಯಕ್ಷ ಸುರೇಶ್ ಋಗ್ವೇದಿ ಹೇಳಿಕೆ
ಚಾಮರಾಜನಗರ: ಮೈಸೂರು ಸಂಸ್ಥಾನದ ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಗೌರವ ಸಲ್ಲಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಂಸ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಹಾಗೂ ಮೈಸೂರು ಸಂಸ್ಥಾನದ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಸುದೀರ್ಘ ಆಡಳಿತವನ್ನು ನೆರವೇರಿಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಸಮಗ್ರ ಅಭಿವೃದ್ಧಿಯ ಜತೆಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ವರ್ಣಕಲೆ, ಚಿತ್ರಕಲೆ, ಶಿಲ್ಪ ಕಲೆಗಳಿಗೆ ಅಪಾರ ಕೊಡುಗೆಯನ್ನು ನೀಡಿದ ಮಹಾದೂರದೃಷ್ಟಿಯ ಅರಸರು. ಚಾಮರಾಜನಗರ ಎಂಬ ನೂತನ ಹೆಸರು ಇಟ್ಟು ಹೊಸ ನಗರ ನಿರ್ಮಿಸುವ ಮೂಲಕ ಭಾರತ ದೇಶದಲ್ಲಿ ಚಾಮರಾಜನಗರ ತನ್ನದೇ ಆದ ಇತಿಹಾಸ ಸಂಸ್ಕೃತಿ ಗೌರವಕ್ಕೆ ಪಾತ್ರವಾಗಲು ಕಾರಣರಾದರು ಎಂದರು.
ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರ ಗೌರವವನ್ನು ಹೆಚ್ಚಿಸಲು ಅವರ ಪ್ರತಿಮೆ ಸ್ಥಾಪಿಸುವ ಮೂಲಕ 200 ವರ್ಷಗಳು ಚಾಮರಾಜನಗರದ ರಥೋತ್ಸವಕ್ಕೆ 200ವರ್ಷವಾಗುತ್ತಿರುವ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಿ ಗೌರವ ನೀಡಬೇಕು. ಇವರಲ್ಲದೇ ಪ್ರಸಿದ್ಧ ಸಾಹಿತಿ ದೇವಚಂದ್ರ, ವೆಂಕಟರಮಣ ಶಾಸ್ತ್ರಿ ರವರು ಅವರ ಆಸ್ಥಾನವನ್ನು ಅಲಂಕರಿಸಿದ್ದರು. ಮಹಾನ್ ಸಂಗೀತಗಾರರಾದ ತ್ಯಾಗರಾಜ ಅವರನ್ನು ಆಹ್ವಾನಿಸಿ ಗೌರವಿಸಿ ಸನ್ಮಾನಿಸಿದ ಕೀರ್ತಿ ಮುಮ್ಮಡಿ ಅವರಿಗೆ ಸಲ್ಲುತ್ತದೆ. ಮೊಟ್ಟಮೊದಲ ಬಾರಿಗೆ ಮುದ್ರಣ ಯಂತ್ರವನ್ನು ಸ್ಥಾಪಿಸುವ ಮೂಲಕ ಅನೇಕ ಕನ್ನಡ ಪುಸ್ತಕಗಳ ರಚನೆಗೆ ಕಾರಣರಾದ ಒಡೆಯರ್ ಪೂಜನೀಯರು ಎಂದು ತಿಳಿಸಿದರು.
ಬರಹಗಾರ ಲಕ್ಷ್ಮೀ ನರಸಿಂಹ ಮಾತನಾಡಿ, ತಂದೆ-ತಾಯಿಯ ಹೆಸರನ್ನು ಚಿರಸ್ಥಾಯಿಯಾಗಿ ಮಾಡುವ ಮೂಲಕ ತಮ್ಮ ತಂದೆ ಚಾಮರಾಜ ಒಡೆಯರ್ ಮತ್ತು ತಾಯಿ ಕೆಂಪನಜಾಂಬ ಅವರ ಹೆಸರಿನಲ್ಲಿ ವಿಶೇಷವಾಗಿ ದೇವಾಲಯವನ್ನು ನಿರ್ಮಾಣ ಮಾಡಿದವರು. ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಚಾಮರಾಜನಗರದ ಮೂಲ ದೇವತೆಗೆ ಅಗ್ರಸ್ಥಾನವನ್ನು ನೀಡಿದರು. ಚಾಮರಾಜನಗರ ಅಭಿವೃದ್ಧಿ ಕಾರಣರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಿರುವುದು ಬಹಳ ಸಂತೋಷ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ, ಮೈಸೂರು ಸಂಸ್ಥಾನ ಹಾಗೂ ಚಾಮರಾಜನಗರಕ್ಕೂ ಅಪಾರ ಪ್ರೀತಿ ಬಾಂಧವ್ಯವಿದೆ. ಚಾಮರಾಜನಗರದ ಸಂಬಂಧದ ಸಾಕ್ಷಿಯಾಗಿ ಚಾಮರಾಜನಗರದಲ್ಲಿ ರಾಜಮುದ್ರೆ ಇರುವುದನ್ನು ನಾವು ಕಾಣಬಹುದು.ಪ್ರತಿ ವರ್ಷ ಶ್ರೀಚಾಮರಾಜೇಶ್ವರ ರಥೋತ್ಸವದ ಸಂದರ್ಭದಲ್ಲಿ ಎಲ್ಲ ಜನಾಂಗದವರ ಭಾವೈಕ್ಯತೆಗೆ ಸಾಕ್ಷಿಯಾಗಿ ಪೂಜಿಸುವ ಪದ್ಧತಿಯ ಇದೆ. ಮೈಸೂರು ಮಹಾರಾಜರೇ ನಗರದ ಏಕತೆಗೆ ಸಾಕ್ಷಿಯಾಗಿದ್ದಾರೆ ಎಂದರು.
ಗಾಯಕ ಕಾಗಲವಾಡಿ ರಂಗಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಂಸ್ಥಾನದ ಒಡೆಯರ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಚರಿಸುತ್ತಿದೆ. ಮಹಾರಾಜರ ಗೌರವಾರ್ಥ ಸಂಗೀತ ಕಾರ್ಯಕ್ರಮವನ್ನು ಗಾಯನ ಕಾರ್ಯಕ್ರಮವನ್ನು ರೂಪಿಸೋಣ. ಎಲ್ಲ ಕಲಾವಿದರು ಅವಕಾಶ ನೀಡಬಹುದು. ಬಿ.ಕೆ.ಆರಾಧ್ಯ, ಶಿವಲಿಂಗಮೂರ್ತಿ, ಸರಸ್ವತಿ, ಚಿತ್ರ ಕಲಾವಿದ ಮಹಮದ್ ಗೌಸ್, ಹರದನಹಳ್ಳಿ ಮದನ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net