ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕೂರಿಸಿ ದೀಪ, ಧೂಪದಾರತಿ ಬೆಳಗಲಾಯಿತು. ಗರುಡವೊಂದು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇಗುಲದ ಆವರಣದಿಂದ ತುಸು ದೂರು ತೇರನ್ನು ಎಳೆಯಲಾಯಿತು. ಈ ವೇಳೆ ಭಕ್ತರು ಗೋವಿಂದ.. ಗೋವಿಂದಾ ಜಯಘೋಷಗಳನ್ನು ಮೊಳಗಿಸಿದರು. ದೇವರ ಗುಡ್ಡರು ಜಾಗಟೆ ಸದ್ದು ಮಾಡುತ್ತ ಶಂಖ ಊದುತ್ತ ಭಕ್ತಿ ಪರವಶವಾದರು. ರಥೋತ್ಸವದಲ್ಲಿ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ ಪುತ್ರ ನವನೀತ್‌ಗೌಡ, ತಹಸೀಲ್ದಾರ್ ಕೆ.ಎನ್ ಚೈತ್ರಾ, ಕೊಳ್ಳೇಗಾಲ ತಾಪಂ ಇಒ ಗುರುಶಾಂತಪ್ಪ, ಇನ್‌ಸ್ಪೆಕ್ಟರ್ ಆನಂದಮೂರ್ತಿ ಇತರರು ಭಾಗಿಯಾಗಿದ್ದರು.