ವಿಜೃಂಭಣೆಯ ಕುರುಬನಕಟ್ಟೆ ಕಂಡಾಯಗಳ ಕೊಂಡೋತ್ಸವ

ಕೊಳ್ಳೇಗಾಲದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಕೊಳ್ಳೇಗಾಲದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
Published on
ಕೊಳ್ಳೇಗಾಲ: ಪಟ್ಟಣದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಕುರುಬನಕಟ್ಟೆ ಕಂಡಾಯಗಳ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬಡಾವಣೆಯಲ್ಲಿರುವ ಶಾಲೆ ಆವರಣದಲ್ಲಿ ಬುಧವಾರ ರಾತ್ರಿ ಕೊಂಡಕ್ಕೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ಕಂಡಾಯಗಳಿಗೆ ಹೂ ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಿ ಕೊಂಡದ ಮಾಳಕ್ಕೆ ತರಲಾಯಿತು. ಕುರುಬನಕಟ್ಟೆ ಕ್ಷೇತ್ರ ಧರ್ಮಾಧಿಕಾರಿ ವರುಣ ಲಿಂಗರಾಜೇ ಅರಸ್ ಅವರು ಪೂಜೆ ಸಲ್ಲಿಸಿದ ಬಳಿಕ ನೀಲಗಾರರು ಸಾವಿರರು ಜನರ ಹರ್ಷೋದ್ಗಾರ ನಡುವೆ ಕಂಡಾಯಗಳನ್ನು ಹೊತ್ತುಕೊಂಡು ಹಾಯ್ದರು.
ಈ ವೇಳೆ ವಿವಿಧ ಕೋಮಿನ ಯಜಮಾನರು, ಮುಖಂಡರಿಗೆ ಹಾರ, ಶಾಲು ಹಾಕಿ ಸನ್ಮಾನಿಸಲಾಯಿತು. ಬಡಾವಣೆಯ ಎಲ್ಲ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ಮಾಡಲಾಯಿತು. ನಿವಾಸಿಗಳು ಹೂ, ಹಣ್ಣು ಕಾಯಿ ಸಮರ್ಪಿಸಿದರು. ಕೊಂಡೋತ್ಸವ ಹಿನ್ನೆಲೆಯಲ್ಲಿ ಬಡಾವಣೆಯ ಎಲ್ಲ ಬೀದಿಗಳಿಗೆ ಹಸಿರು ದೀಪಾಲಂಕಾರ ಮಾಡಲಾಗಿತ್ತು. ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಬಡಾವಣೆಯ ದೊಡ್ಡ ಯಜಮಾನ ಪರಮೇಶ್, ಯಜಮಾನರಾದ ನಟರಾಜು, ದೇವರಾಜು, ನಂಜುಂಡ, ನಾಗರಾಜು, ಮರಿಸ್ವಾಮಿ, ರಮೇಶ್, ನಟೇಶ್, ಮೂರ್ತಿ, ಮಾದಪ್ಪ, ನಗರಸಭೆ ಮಾಜಿ ಸದಸ್ಯ ಧರಣೇಶ್, ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ನಟರಾಜು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net