ಗೃಹರಕ್ಷಕ ದಳದ ಕಾರ್ಯನಿರ್ವಹಣೆ ಸಹಕಾರಿ

ಚಾಮರಾಜನಗರದ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಿವೈಎಸ್ಪಿ ಧಮೇರ್ಂದ್ರ ಉದ್ಘಾಟಿಸಿದರು. ಜಿ.ಆರ್.ಸೋಮಣ್ಣ, ಎಸ್.ಜಿ..ಮಹಾಲಿಂಗಸ್ವಾಮಿ, ಆರ್.ಚಂದನ್, ಕುಂಚನೂರು ಇನ್ನಿತರರಿದ್ದರು.
ಚಾಮರಾಜನಗರದ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಿವೈಎಸ್ಪಿ ಧಮೇರ್ಂದ್ರ ಉದ್ಘಾಟಿಸಿದರು. ಜಿ.ಆರ್.ಸೋಮಣ್ಣ, ಎಸ್.ಜಿ..ಮಹಾಲಿಂಗಸ್ವಾಮಿ, ಆರ್.ಚಂದನ್, ಕುಂಚನೂರು ಇನ್ನಿತರರಿದ್ದರು.
Published on
ಚಾಮರಾಜನಗರ: ಗೃಹರಕ್ಷಕ ದಳವು ಕಾನೂನು ಮತ್ತು ಶಿಸ್ತುಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕ ಕೆಲಸ ಮಾಡುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೊಳ್ಳೇಗಾಲ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಧಮೇರ್ಂದ್ರ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಗೃಹರಕ್ಷಕ ದಳದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಂತರಿಕ ಪರಿಸ್ಥಿತಿಯನ್ನು ನಿಭಾಯಿಸಲು ಗೃಹರಕ್ಷಕ ದಳವು ಸ್ವಯಂಸೇವಕರಾಗಿ ಶ್ರಮಿಸುತ್ತಿದೆ. ಪ್ರಾಮಾಣಿಕವಾಗಿ ಧೃಡಸಂಕಲ್ಪ ನಿಲುವನ್ನು ಹೊಂದುವ ಮೂಲಕ ಪೊಲೀಸ್ ಇಲಖೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತದೆ ಎಂದರು.
ಗೃಹರಕ್ಷಕ ದಳ ಸಿಬ್ಬಂದಿ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಿಸ್ತನ್ನು ಪಾಲಿಸಬೇಕು. ಸಾರ್ವಜನಿಕರ ಜೀವ ಮತ್ತು ಆಸ್ತಿ ಸಂರಕ್ಷಣೆ, ವಿಪತ್ತು ನಿರ್ವಹಣೆ, ಪುನರ್ವಸತಿ ಕಾರ್ಯಗಳು, ಅಗ್ನಿ ಅವಘಡ, ವೈಮಾನಿಕ ದಾಳಿ, ಸುನಾಮಿ, ಪ್ರಳಯ, ಭೂಕಂಪ, ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಂದರ್ಭದಲ್ಲಿ ಗೃಹರಕ್ಷಕ ದಳ ಪೊಲೀಸರು ಹಾಗೂ ಇನ್ನಿತರ ಕಾರ್ಯಾಚರಣೆಯಲ್ಲಿ ಜತೆಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಡಿವೈಎಸ್‌ಪಿ ಜಿ.ಆರ್.ಸೋಮಣ್ಣ ಮಾತನಾಡಿ, 1962ರಲ್ಲಿ ಭಾರತ ಮತ್ತು ಚೀನಾ ಯುದ್ಧದ ಸಂದರ್ಭದಲ್ಲಿ ಸ್ವಯಂ ಸೇವಕರ ಸೇವೆಯನ್ನು ರಕ್ಷಣಾ ಕಾರ್ಯಕ್ಕೆ ಬಳಸುವ ಉದ್ದೇಶದಿಂದ ಕೇಂದ್ರವು ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಯಂ ಸೇವಕರ ತಂಡವನ್ನು ಗೃಹರಕ್ಷಕದಳ ಎಂದು ನಾಮಕರಣ ಮಾಡಿ ಸಮವಸ್ತ್ರ ನೀಡಿ ಮನ್ನಣೆಯನ್ನು ನೀಡಿತು ಎಂದರು.
ಗೃಹರಕ್ಷಕ ದಳದ ಜಿಲ್ಲಾ ಸಮದೇಷ್ಟರಾದ ಎಸ್.ಜಿ.ಮಹಾಲಿಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 700 ಗೃಹರಕ್ಷಕ ಸಿಬ್ಬಂದಿ ಇದ್ದು, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳೊಂದಿಗೆ ಶಿಸ್ತಿನಿಂದ ಕೆಲಸ ನಿರ್ವಹಿಸುತ್ತಿದೆ. ಸಮಯ ಪ್ರಜ್ಞೆಯನ್ನು ಪ್ರತಿಯೊಬ್ಬ ಸಿಬ್ಬಂದಿ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿದರೆ ಇಲಾಖೆ ಹಾಗೂ ಸಿಬ್ಬಂದಿಗೆ ಗೌರವ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗುಂಡ್ಲುಪೇಟೆ ವಿಭಾಗದ ಪಿ. ಶಂಕರ್, ವೈ.ಟಿ. ಕೃಷ್ಣೇಗೌಡ ಸಿದ್ದರಾಜು, ಯಳಂದೂರು ವಿಭಾಗದ ಆರ್.ಕೃಷ್ಣಮೂರ್ತಿ, ಚಾಮರಾಜನಗರ ವಿಭಾಗದ ಕೆ. ಪ್ರಭು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಬೋಧಕ ಆರ್. ಚಂದನ್, ಜಿಲ್ಲಾ ಕೇಂದ್ರಸ್ಥಾನ ಆರಕ್ಷಕ ಉಪನಿರೀಕ್ಷಕ ಬಿ.ಸಿ. ಕುಂಚನೂರು, ಗೃಹರಕ್ಷಕ ದಳದ ಸೋಮಣ್ಣ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net