ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಬಗ್ಗೆ ಹಿಂದಿನಿಂದಲೂ ಕೂಗು ಕೇಳಿ ಬರುತ್ತಿದೆ. ಹಿಂದೆ ಹಿಮಾಚಲ ಪ್ರದೇಶ, ಕೇರಳ ಹಾಗೂ ಗೋವಾದ ರಾಜ್ಯಾಪಾಲರಾಗಿದ್ದ ತಂದೆ ಬಿ.ರಾಚಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಈ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ ಅವಕಾಶ ದೊರಕಲಿಲ್ಲ. ಹಾಗಾಗಿ ಮೀಸಲು ಕ್ಷೇತ್ರದ ಶಾಸಕರು ಈ ಬಗ್ಗೆ ದನಿಯಾಗಬೇಕಿದೆ ಎಂದರು.