

ಪ್ರಮುಖ ಮುಖ್ಯಾಂಶಗಳು
ಹನೂರು:
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ನಲ್ಲಿ ಜೀವಕಳೆ ಮೈದಳೆದಿದೆ.
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ಕಾನನದ ನಡುವೆ ಭೋರ್ಗರೆದು ಹರಿಯುತ್ತಿದೆ. ಹೊಗೇನಕಲ್ ಫಾಲ್ಸ್ ಹಾಲ್ನೋರೆಯಂತೆ ಧುಮ್ಮಿಕ್ಕುವ ಮೂಲಕ ರುದ್ರ ರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಭೋರ್ಗರೆತದ ಸದ್ದು ಜೋರಾಗಿದೆ.
ಹೊಗೇನಕಲ್ ಫಾಲ್ಸ್‌ನ ಭೋರ್ಗರೆತದ ಸದ್ದು, ರುದ್ರ ರಮಣಿಯ ದೃಶ್ಯ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಫಾಲ್ಸ್‌ಗೆ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, 2 ತಿಂಗಳಿನಿಂದ ಫಾಲ್ಸ್‌ನಲ್ಲಿ ಧುಮ್ಮಿಕ್ಕುವ ದೃಶ್ಯ ಮಾಯವಾಗಿತ್ತು. ಈ ವೇಳೆ ವೀಕ್ಷಣೆಗಾಗಿ ಆಗಮಿಸಿದ್ದ ಪ್ರವಾಸಿಗರಲ್ಲಿ ನಿರಾಸೆಯಾಗಿತ್ತು. ಈಗ ಫಾಲ್ಸ್ ತನ್ನ ವೈಭವವನ್ನು ಮರಳಿ ಪಡೆದಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.