ಅವರು ತಾಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಗುರುವಾರ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಕೊಳ್ಳೇಗಾಲ ಇವರ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಜನಪದ ಮಹಾಕಾವ್ಯಗಳು ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಿನ್‌ಲ್ಯಾಂಡಿನ ಕಲೈವಾಲವನ್ನು ಹೊರತುಪಡಿಸಿದರೆ ಈ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಜನಪದ ಮಹಾಕಾವ್ಯ ಪರಂಪರೆ ಎಂದರೆ ಅದು ಮಲೆಮಹದೇಶ್ವರ ಕಾವ್ಯ ಪರಂಪರೆ. ಜಿಲ್ಲೆಯಲ್ಲಿ ಮಹದೇಶ್ವರ ಕಾವ್ಯ, ಬೀಸು ಕಂಸಾಳೆ, ಗೊರವರ ಕುಣಿತ, ಮಂಟೆಸ್ವಾಮಿ ಕಾವ್ಯ, ಲಂಬಾಣಿ ನೃತ್ಯ, ಪಿನಾಸಿ ನೃತ್ಯ, ಕೋಲಾಟ, ಸೋಬಾನೆ ಪದ, ವೀರ ಮಕ್ಕಳ ಕುಣಿತ, ಸುಗ್ಗಿ ಕುಣಿತ, ಬೀಸುಕಲ್ಲಿನ ಪದ ಸೇರಿದಂತೆ ಹಲವು ಪ್ರಕಾರದ ಜನಪದ ಕಲೆಗಳ ಹಿನ್ನೆಲ್ಲಿ ಇದೆ ಎಂದು ಪ್ರಶ್ನಿಸಿದರು.