ಪ್ರತಿಯೊಬ್ಬರಿಗೂ ಸಂವಿಧಾನ ನೀಡಿದೆ ಸುಪ್ರೀಂ ಪವರ್

 ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ತಾಲೂಕು ಮುಸ್ಲಿಂ ಸಮು ದಾಯ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟ ವತಿಯಿಂದ 77ನೇ ಸಂವಿಧಾನ ಜನಜಾಗೃತಿ ಸಮಾವೇಶಕ್ಕೆ ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ಅಮ್ಜದ್ ಖಾನ್ ಖಾಸಿಮಿ, ಜೇತವನ ಬುಧ್ಧ ವಿಹಾರದ ಮನೋ ರಕ್ಷಿತ ಬಂತೇಜಿ, ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯ ಧರ್ಮ ಗುರು ರೆವ.ಫಾ.ರಾಯಪ್ಪ ಚಾಲನೆ ನೀಡಿದರು. ಹ.ರಾ ಮಹೇಶ್, ಎ.ಜೆ ಖಾನ್, ರಫೀಕ್ ಅಹಮ್ಮದ್, ಚೇತನ್ ದೊರೈರಾಜ್ ಇತರರಿದ್ದರು.
ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ತಾಲೂಕು ಮುಸ್ಲಿಂ ಸಮು ದಾಯ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟ ವತಿಯಿಂದ 77ನೇ ಸಂವಿಧಾನ ಜನಜಾಗೃತಿ ಸಮಾವೇಶಕ್ಕೆ ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ಅಮ್ಜದ್ ಖಾನ್ ಖಾಸಿಮಿ, ಜೇತವನ ಬುಧ್ಧ ವಿಹಾರದ ಮನೋ ರಕ್ಷಿತ ಬಂತೇಜಿ, ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯ ಧರ್ಮ ಗುರು ರೆವ.ಫಾ.ರಾಯಪ್ಪ ಚಾಲನೆ ನೀಡಿದರು. ಹ.ರಾ ಮಹೇಶ್, ಎ.ಜೆ ಖಾನ್, ರಫೀಕ್ ಅಹಮ್ಮದ್, ಚೇತನ್ ದೊರೈರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೇತವನ ಬುದ್ಧ ವಿಹಾರದ ಮನೋರಕ್ಷಿತ ಬಂತೇಜಿ ಹೇಳಿಕೆ
  • ಸಂವಿಧಾನ ಜನಜಾಗೃತಿ ಸಮಾವೇಶ
ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ತಾಲೂಕು ಮುಸ್ಲಿಂ ಸಮುದಾಯ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟ ವತಿಯಿಂದ 77ನೇ ಸಂವಿಧಾನ ಜನಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು.
ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ಅಮ್ಜದ್ ಖಾನ್ ಖಾಸಿಮಿ ಅವರು ಪ್ರಾರ್ಥನೆ ಸಲ್ಲಿಸಿದರು. ಚೆನ್ನಾಲಿಂಗನಹಳ್ಳಿಯ ಜೇತವನ ಬುದ್ಧ ವಿಹಾರದ ಮನೋರಕ್ಷಿತ ಬಂತೇಜಿ, ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯ ಧರ್ಮ ಗುರು ರೆವ.ಫಾ.ರಾಯಪ್ಪ ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಂಗಳೂರಿನ ಪ್ರಗತಿಪರ ಚಿಂತಕ ಹ.ರಾ.ಮಹೇಶ್ ಮಾತನಾಡಿ, ಸಂವಿಧಾನ ಒಂದು ಪುಸ್ತಕವಲ್ಲ ಇದು 140 ಕೋಟಿ ಭಾರತೀಯರನ್ನು ಹೊತ್ತುಕೊಂಡಿರುವ ಹೊತ್ತಗೆಯಾಗಿದೆ. ಮನುವಾದಿಗಳು ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧಿಗಳಾಗಿದ್ದಾರೆ. ಪ್ರಪಂಚದ ಮಹಾಜ್ಞಾನಿ ಅಂಬೇಡ್ಕರ್ ಸಂಸದರಾಗಬಾರದೆಂದು ಸೋಲಿಸಿದರು. ನಂತರ ಸಂವಿಧಾನದ ರಚನಾ ಸಮಿತಿಗೆ ಸೇರಬಾರದು ಎಂದು ಕುತಂತ್ರ ಮಾಡಿದರು. ಸಂವಿಧಾನ ರಚನೆಯಾದರೂ ಅದರಲ್ಲಿರುವ ಆರ್ಟಿಕಲ್‌ಗಳು ಜಾರಿಯಾಗದಂತೆ 77 ವರ್ಷಗಳು ಕುತಂತ್ರ, ಪಿತೂರಿ ಮಾಡಿಕೊಂಡೇ ಬಂದರು. ಈಗಲಾದರೂ ಬಹುಜನರು ಸಂವಿಧಾನ ಬಗ್ಗೆ ಜಾಗೃತಿ ಹೊಂದಬೇಕಿದೆ ಎಂದರು.
ಮನೋರಕ್ಷಿತ ಬಂತೇಜಿ ಮಾತನಾಡಿ, ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಸುಪ್ರೀಂ ಪವರ್ ಕೊಟ್ಟಿದೆ. ಇದರಿಂದ ಪ್ರಜಾಪ್ರಭುತ್ವ ಉಳಿಸಿ ಬೆಳೆಸಬೇಕಾದದ್ದು ಭಾರತೀಯನ ಕರ್ತವ್ಯವಾಗಿದೆ ಎಂದರು.ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ಸಂವಿಧಾನ ಮಹಿಳೆಯರಿಗೆ ಸಾಕಷ್ಟು ಮಹತ್ವ ನೀಡಿದೆ. ಸಂವಿಧಾನ ಬರುವ ಮುನ್ನ ದೇಶದ ಮೊದಲ ವೈದ್ಯೆ ಡಾ.ಮುತ್ತುಲಕ್ಷ್ಮೀ, ಶಿಕ್ಷಕಿ ಸಾವಿತ್ರಿ ಬಾಫುಲೆ ಅವರು ಪಟ್ಟಂತಹ ಸಂಕಷ್ಟವನ್ನು ತಿಳಿಸಿದರು. ರಾಷ್ಟ್ರ ಲಾಂಛನ, ರಾಷ್ಟ್ರಗೀತೆ ನಮ್ಮಲ್ಲಿ ಒಗ್ಗಟ್ಟು ಉಂಟಾಗಲು ಸಂವಿಧಾನ ಪೂರಕವಾಗಿದೆ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಬೆಂಗಳೂರು ದಲಿತ ಮೈನಾರಿಟಿ ಸೇನೆ ಅಧ್ಯಕ್ಷ ಎ.ಜೆ ಖಾನ್, ಕೆಪಿಸಿಸಿ ಅಲ್ಪ ಸಂಖ್ಯಾಂತರ ಘಟಕ ಉಪಾಧ್ಯಕ್ಷ ರಫೀಕ್ ಅಹಮ್ಮದ್, ಪಿಎಸಿಸಿ ನಿರ್ದೇಶಕ ಮುಳ್ಳೂರು ಮಂಜು, ಸಾಹಿತಿ ಶಂಕನಪುರ ಮಹದೇವ, ಶಂಭುಲಿಂಗಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಯೋಗೇಶ್, ಮಾಜಿ ಸದಸ್ಯ ಮುಳ್ಳೂರು ಕಮಲ್, ನಗರಸಭೆ ಮಾಜಿ ಸದಸ್ಯರಾದ ಶಾಂತರಾಜು, ಮಂಜುನಾಥ್, ಮುಡಿಗುಂಡ ಶಾಂತರಾಜು, ಅಕ್ಮಲ್ ಪಾಷ, ವಕೀಲ ರಾಜೇಂದ್ರ, ವಡಗೆರೆ ಮಹದೇವ, ಕಿಜರ್, ಚೇತನ್ ದೊರೈರಾಜ್, ಲೋಕೇಶ್ ನಂಜುಂಡಸ್ವಾಮಿ, ಆಯೋಜಕರಾದ ಸಯ್ಯದ್ ಏಜಾಜ್, ಮುಹಮ್ಮದ್ ಮತೀನ್, ಆಸೀಪುಲ್ಲಾ, ಮಹಮ್ಮದ್ ಇರ್ಫಾನ್, ಅಯೂಬ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net