ಈ ಬಾರಿ ತಾಲೂಕಿನಲ್ಲಿ 9940 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 376 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 5500 ಹೆಕ್ಟೇರ್ ಭೂಮಿಯಲ್ಲಿ ಸಣ್ಣ ಜೋಳ, 435 ಹೆಕ್ಟೇರ್‌ನಲ್ಲಿ ಹತ್ತಿ, 745 ಹೆಕ್ಟೇರ್‌ನಲ್ಲಿ ನೆಲಗಡಲೆ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಾರಿ ಭಿತ್ತನೆ ನಂತರ ಪೂರ್ವ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಎರಡೆರಡು ಬಾರಿ ಬಿತ್ತನೆ ಮಾಡಿದರೂ ನಂತರ ಮಳೆ ಬೀಳದೆ ಎಲ್ಲ ಫಸಲುಗಳು ನಾಶವಾಗಿವೆ.