ಮೂರ್ತಿಯನ್ನು ಒಳಗೊಂಡ ಬಂಡೆಯ ಮೇಲೆ ನಿರ್ಮಿಸಿರುವ ಈ ದೇಗುಲದಲ್ಲಿ ಅಜ್ಜಿಯ ವಂಶಸ್ಥರೇ ಹಲವು ತಲೆಮಾರಿನಿಂದ ಅರ್ಚಕ ವೃತ್ತಿ ಮಾಡುತ್ತಿದ್ದಾರೆ. ದೇಗುಲದ ಮೇಲ್ಭಾಗದಲ್ಲಿ ಹನುಮ, ಶನೈಶ್ಚರ ಹಾಗೂ ವೆಂಕಟರಮಣ ಸ್ವಾಮಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಆಂಜನೇಯಸ್ವಾಮಿ ಪಾದ ಸ್ಪರ್ಶಿಸಿದ ಗುರುತು ಇದ್ದ ಸ್ಥಳದಲ್ಲಿ ಕಲ್ಲಿನ ಪಾದುಕೆಯನ್ನು ಇರಿಸಲಾಗಿದೆ. ದೇಗುಲದಲ್ಲಿ ಪ್ರತಿ ಶನಿವಾರ, ಅಮಾವಾಸ್ಯೆ, ಹುಣ್ಣಿಮೆ ಸೇರಿದಂತೆ ವಿಶೇಷ ಹಬ್ಬ, ಹರಿದಿನಗಳಂದು ಸಂಕಲ್ಪ ಸಹಿತ ಪೂಜೆಯನ್ನು ನೆರವೇರಿಸಲಾಗುತ್ತದೆ.