ತಿಳಿ ಹೇಳಿ ಆರ್‌ಎಸ್‌ಎಸ್ ಶಿಬಿರ ನಿಲ್ಲಿಸಿದ ಕರವೇ

ಕೊಳ್ಳೇಗಾಲದ ಖಾಸಗಿ ಶಾಲೆಯೊಂದರಲ್ಲಿ ಆರ್‌ಎಸ್‌ಎಸ್ ಶಿಬಿರ ನಡೆಯುತ್ತಿರುವುದು.
ಕೊಳ್ಳೇಗಾಲದ ಖಾಸಗಿ ಶಾಲೆಯೊಂದರಲ್ಲಿ ಆರ್‌ಎಸ್‌ಎಸ್ ಶಿಬಿರ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ವಿದ್ಯಾ ಸಂಸ್ಥೆಯೊಂದರ ಆವರಣದಲ್ಲಿ ಆಯೋಜನೆ
ಕೊಳ್ಳೇಗಾಲ: ಪಟ್ಟಣದ ಶಂಕನಪುರ ಬಡಾವಣೆ ಸಮೀಪವಿರುವ ಖಾಸಗಿ ವಿದ್ಯಾ ಸಂಸ್ಥೆಯೊಂದರ ಆವರಣದಲ್ಲಿ ಅನುಮತಿಯಿಲ್ಲದೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ನಡೆಸುತ್ತಿದ್ದ ಶಿಬಿರದ ಸ್ಥಳಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಭೇಟಿ ನೀಡಿ ಪ್ರಶ್ನಿಸಿದ್ದು, ಅನುಮತಿ ಇಲ್ಲದೆ ಶಿಬಿರ ನಡೆಸಬಾರದೆಂದು ಶಿಬಿರದ ಮುಖ್ಯಸ್ಥರಿಗೆ ತಿಳಿಹೇಳುವ ಮೂಲಕ ನಿಲ್ಲಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿ ಇಲ್ಲದೆ ಎರಡು ದಿನಗಳಿಂದ ಶಾಲೆ ಆವರಣದಲ್ಲಿ ಆರ್‌ಎಸ್‌ಎಸ್ ಶಿಬಿರ ನಡೆಯುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಯಾಜ್ ಕನ್ನಡಿಗ, ಶಂಕನಪುರ ಬಡಾವಣೆಯ ಲಿಂಗರಾಜು ಮತ್ತು ಇತರರು ಆರ್‌ಎಸ್‌ಎಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ, ಪಿಎಸ್‌ಐ ವರ್ಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕರವೇ ಪದಾಧಿಕಾರಿಗಳು ಹಾಗು ನಿವಾಸಿಗಳನ್ನು ಸಮಾಧಾನಪಡಿಸಿದರು. ಶಾಲಾ ಸಂಸ್ಥೆಯವರು ಶಿಕ್ಷಣಾಧಿಕಾರಿಗಳಲ್ಲಿ ಶಿಬಿರ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ ಎಂದು ಶಿಬಿರದ ಮುಖ್ಯಸ್ಥ ಶಿವಕುಮಾರ್ ತಿಳಿಸಿದ್ದಾರೆ.
ವೃತ್ತ ನಿರೀಕ್ಷಕ ಶಿವಮಾದಯ್ಯ ಮಾತನಾಡಿ, ಶಾಲೆ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಅವಕಾಶವಿದೆ. ಶೈಕ್ಷಣಿಕೇತರ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಿಬಿರ ನಡೆಸಲು ಇಲಾಖೆಯಿಂದ ಯಾವುದೇ ರೀತಿಯ ಆದೇಶ ಮತ್ತು ಅನುಮತಿ ಇಲ್ಲದೆ ಇರುವು ದರಿಂದ ಶಿಬಿರವನ್ನು ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಶಿಬಿರ ನಡೆಸಿ ದೂರು ದಾಖಲಾದಲ್ಲಿ ಸಂಬಂಧಿಸಿದ ಶಾಲೆ ಆಡಳಿತ ಮಂಡಳಿಯವರೇ ನೇರ ಹೊಣೆಗಾರರಾಗುತ್ತಾರೆಂದು ಸಂಸ್ಥೆಯ ಪ್ರಾಂಶುಪಾಲರಿಗೆ ಶುಕ್ರವಾರ ಪತ್ರ ನೀಡಿದ್ದಾರೆ. ಲ್ಲದೆ ಅನುಮತಿ ಪಡೆಯದೆ ಶಿಬಿರ ಮಾಡಬೇಡಿ ಎಂದು ತಿಳಿ ಹೇಳಿ ನಿಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net